ನೀಟ್-ವಿರೋಧಿ ಘೋಷಣೆಯ ಮಾಸ್ಕ್ ಧರಿಸಿ ವಿಧಾನಸಭೆಗೆ ಹಾಜರಿ; ಡಿಎಂಕೆ ಸದಸ್ಯರ ವಿನೂತನ ಪ್ರತಿಭಟನೆ
ಚೆನ್ನೈ,
ಸೆಪ್ಟೆಂಬರ್ 14: ನೀಟ್ ಪರೀಕ್ಷಾ ಭೀತಿಯಿಂದ ತಮಿಳುನಾಡಿನ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ವಿಪಕ್ಷ ಡಿಎಂಕೆ ಸೋಮವಾರ
ನೀಟ್-ವಿರೋಧಿ ಘೋಷಣೆಗಳನ್ನು ಹೊತ್ತು ಮಾಸ್ಕ್ ಧರಿಸಿ ವಿಧಾನಸಭಾ ಕಲಾಪಕ್ಕೆ ಹಾಜರಾದರು.
ಡಿಎಂಕೆ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಮತ್ತಿತರರು 'ನೀಟ್ ನಿಷೇಧಿಸಿ, ತಮಿಳುನಾಡು ವಿದ್ಯಾರ್ಥಿಗಳನ್ನು ರಕ್ಷಿಸಿ' ಎಂಬ ಘೋಷಣೆಗಳನ್ನು ಹೊತ್ತು ಬಿಳಿಯ ಮಾಸ್ಕ್ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕೋವಿಡ್ -19 ಹಿನ್ನೆಲೆಯಲ್ಲಿ ಮಾಸ್ಕ್ ದರಿಸುವುದು ಕಡ್ಡಾಯವಾದ್ದರಿಂದ, ಡಿಎಂಕೆ ಸದಸ್ಯರು ಅದೇ ಮಾರ್ಗವನ್ನು ಪ್ರತಿಭಟನೆಗಾಗಿ ಬಳಸಿಕೊಂಡಿದ್ದಾರೆ. ಈ ಘೋಷಣೆಗಳು ತಮಿಳು ಮತ್ತು ಆಂಗ್ಲ ಭಾಷೆಯಲ್ಲಿದ್ದವು.
ಈಗಾಗಲೇ ತಮಿಳುನಾಡಿನಲ್ಲಿ ನಾಲ್ವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಭೆ ಮುಂದೂಡಲ್ಪಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ಷನೀಟ್ ಪರೀಕ್ಷೆ ರದ್ದುಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಮೇಲೆ ಸಾಕಷ್ಟು ಒತ್ತಡ ಹಾಕಲಿಲ್ಲ ಎಂದು ಆರೋಪಿಸಿದರು.