ರಾಷ್ಟ್ರೀಯ

ಡಿಎಂಕೆ ಮಾಜಿ ಸಂಸದ ಕಲಾನಿಧಿ ನಿಧನ

ಡಿಎಂಕೆ ಮಾಜಿ ಸಂಸದ ಕಲಾನಿಧಿ ನಿಧನ

ಚೆನ್ನೈ, ಸೆಪ್ಟೆಂಬರ್ 18: ಡಿಎಂಕೆ ಮಾಜಿ ಸಂಸದ ಡಾ.ಎ.ಕಲಾನಿಧಿ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಡಾ.ಕಲಾನಿಧಿ 1980 ಮತ್ತು 1984ರಲ್ಲಿ ಎರಡು ಬಾರಿ ಅವರು ಸೆಂಟ್ರಲ್ ಮದ್ರಾಸ್ (ಈಗ ಚೆನ್ನೈ) ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಡಾ.ಕಲಾನಿಧಿ ಅವರ ನಿಧನಕ್ಕೆ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ