ರಾಷ್ಟ್ರೀಯ

ಬಿಇಎಲ್ ನಿಂದ ಲಿಂಕ್ಸ್ -ಯು 2 ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಂದ

ಬಿಇಎಲ್ ನಿಂದ ಲಿಂಕ್ಸ್ -ಯು 2 ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಂದ

ನವದೆಹಲಿ, ಜ 1: ಅಗ್ನಿ ನಿಯಂತ್ರಣ ವ್ಯವಸ್ಥೆ ಹೊಂದಿರುವ ಲಿಂಕ್ಸ್ -ಯು 2   ಆಧುನಿಕ  ಪರಿಕರಗಳನ್ನು  ಖರೀದಿಸಲು   ರಕ್ಷಣಾ ಸಚಿವಾಲಯ,  ಭಾರತ್  ಎಲೆಕ್ಟ್ರಾನಿಕ್ಸ್ ಲಿಮಿಟೆಡ್  - ಬಿಇಎಲ್   ನಡುವೆ  ಒಡಂಬಡಿಕೆ ಮಾಡಿಕೊಂಡಿದೆ ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುವ ಯುದ್ಧ ಹಡಗುಗಳ ಮುಂಚೂಣಿ  ಕಾರ್ಯ ಪಡೆಗಾಗಿ ಈ ಅಗ್ನಿ ನಿಯಂತ್ರಣ ಪರಿಕರಗಳನ್ನು  1,355 ಕೋಟಿ ರೂಪಾಯಿ ವೆಚ್ಚದಲ್ಲಿ  ಖರೀದಿಸಲಾಗುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಅವರ  ಸ್ವಾವಲಂಬಿ ಭಾರತ ಆಶಯವನ್ನು  ಸಕಾರಗೊಳಿಸಲು  ಬಿಇಎಲ್ ಲಿಂಕ್ಸ್ -ಯು2 ಪರಿಕರಗಳನ್ನು ದೇಶೀಯವಾಗಿ ಉತ್ಪಾದಿಸಿದೆ.

  


ಸುದ್ದಿ ಓದಿ