ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಿಸಿ ಪವನ್ ಕುಮಾರ್ ಮಾಲಪಾಟಿ ಅಧಿಕಾರ ಸ್ವೀಕಾರ
ಬಳ್ಳಾರಿ, ಮೇ 26: ಸರ್ಕಾರದ ಅಧಿಸೂಚನೆಯನ್ವಯ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟ ಹಾಗೂ ವೈಯಕ್ತಿಕ ಗಮನಕ್ಕೆ ತರಬೇಕಾದಂತಹ ಸರ್ಕಾರಿ ಮತ್ತು ಅರೆಸರ್ಕಾರಿ ಪತ್ರಗಳು, ಪ್ರಮುಖ ದಾಖಲೆಗಳು ಮತ್ತು ಗೌಪ್ಯ ಪತ್ರಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ.
ವಿಳಾಸ: ಪವನ್ಕುಮಾರ್ ಮಾಲಪಾಟಿ, ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, ಹೆಚ್.ಆರ್.ಜಿ ವೃತ್ತ ಹತ್ತಿರ, ಪಿನ್ ಕೋಡ್ 583101 ಮತ್ತು ದೂರವಾಣಿ ಸಂಖ್ಯೆ-08392273731, 08392276192 ಹಾಗೂ ಇ-ಒಚಿಟ: ಛಿಠಛಣಜಚಿಛಟಥಿಅರಟಚಿಟ.ಛಿಠ, ಘಜಛ ಖಣಜ: ತಿತಿತಿ.ಛಜಟಟಚಿಡಿಥಿ.ಣಜಚಿ.ರಠ.ಟಿ ಈ ವಿಳಾಸಕ್ಕೆ ಕಳುಹಿಸಿಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪವನ್ಕುಮಾರ್ ಮಾಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.