ಹೊಸ ವರ್ಷ ಒಳಿತನ್ನೇ ತರಲಿ: ನಟ ದರ್ಶನ್ ಹಾರೈಕೆ
ಬೆಂಗಳೂರು, ಜ 01 : ಪ್ರಾಕೃತಿಕ ವಿಕೋಪಗಳು, ಕೊರೋನಾ ಸಾಂಕ್ರಾಮಿಕದಂತಹ ಆತಂಕಗಳಿಗೆ ಸಾಕ್ಷಿಯಾದ 2020 ಕ್ಕೆ ಬಾಯ್ ಹೇಳಿ 2021ನ್ನು ಸ್ವಾಗತಿಸಲಾಗಿದೆ. ಈ ವರ್ಷ ಹಳೆಯ ಕಹಿಯನ್ನು ಮರೆಸಲಿ ಎಂದು ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ತಾರೆಯರು ಆಶಿಸಿದ್ದಾರೆ.ದರ್ಶನ್, “ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕೊರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್,"ಹೊಸ" ಎನ್ನುವ ಪದದಲ್ಲೇ ಹೊಸತೊಂದು ಆರಂಭವಿದೆ, ಹೊಸತೊಂದು ಕಲ್ಪನೆಯಿದೆ, ಹೊಸತೊಂದು ಉತ್ಸಾಹವಿದೆ, ಹೊಸತೊಂದು ಭರವಸೆಯಿದೆ.. ಹಾಗಾಗಿ ಈ ಹೊಸ ವರ್ಷ ನಿಮಗೆಲ್ಲಾ ಹೊಸ ಬದುಕೊಂದನ್ನು ಹೊತ್ತು ತರಲಿ ಎಂದು ಆಶಿಸುತ್ತಾ, ನಾಡಿನ ಸಮಸ್ತ ಜನತೆಗೆ ಹಾಗೂ ನನ್ನ ಪ್ರೀತಿಯ ಅಭಿಮಾನಿ ಬಳಗಕ್ಕೆ "ಹೊಸ ವರ್ಷದ ವಿಶೇಷ ಶುಭಾಶಯಗಳು" ಎಂದಿದ್ದಾರೆ. ಸಂಸದೆ, ನಟಿ ಸುಮಲತಾ, “ಹೊಸ ಕನಸು, ಹೊಸ ಹುಮ್ಮಸ್ಸು, ಹೊಸ ಬದುಕಿನ ಜತೆ, ಹೊಸ ವರ್ಷವನ್ನು ಬರಮಾಡಿಕೊಳ್ಳೋಣ. ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟಿಸಿದ್ದಾರೆ.ನಟಿ ಅಮೂಲ್ಯ,ಹೊಸ ವರ್ಷ ಒಳಿತನ್ನು ಮಾಡಲಿ. . ಹೊಸ ವರ್ಷದ ಹಾರ್ದಿಕ ಶುಭಾಶಯಗಳು” ಎಂದು ಸೆಲ್ಫಿ ಭಾವಚಿತ್ರದೊಡನೆ ಟ್ವೀಟ್ ಮಾಡಿದ್ದಾರೆ.