ಸೌಂದತ್ತಿ

ಡಿ ದೇವರಾಜ ಅರಸುರವರ ಆದರ್ಶಮಯ ಜೀವನ ಪ್ರತಿಯೊಬ್ಬರಿಗೂ ಮಾದರಿ: ಶಾಸಕ ವೈದ್ಯ

ಡಿ ದೇವರಾಜ ಅರಸುರವರ ಆದರ್ಶಮಯ ಜೀವನ ಪ್ರತಿಯೊಬ್ಬರಿಗೂ ಮಾದರಿ: ಶಾಸಕ ವೈದ್ಯ

ಸವದತ್ತಿ 22: ದೀನದಲಿತರ ಬಗ್ಗೆ ಅಪಾರ ಕಾಳಜಿವಹಿಸಿ ಕೆಳವರ್ಗದ ಜನರ ಆಶಯಗಳನ್ನು ಈಡೇರಿಸಿದ ಕರ್ನಾಟಕದ ಮುಖ್ಯಮಂತ್ರಿ ದಿ. ಡಿ ದೇವರಾಜ ಅರಸುರವರ ಸಾಮಾಜಿಕ ಕಳಕಳಿ ಹಾಗೂ ಅವರ ಆದರ್ಶಮಯ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಶಾಸಕ ವಿಶ್ವಾಸ ವಸಂತ ವೈದ್ಯರವರು ಹೇಳಿದರು. 

ಸ್ಥಳೀಯ ಗುರುಭವನದಲ್ಲಿ ತಾಲೂಕಾ ಆಡಳಿತ ಹಾಗೂ ಪುರಸಭೆ ಮತ್ತು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಆಚರಿಸಿದ ಡಿ.ದೇವರಾಜ ಅರಸುರವರ 108 ನೇಯ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು  

ಸಮಾಜದಲ್ಲಿರುವ ಪ್ರತಿಯೊಬ್ಬರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂಬರಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಜನಸೇವೆ ಮಾಡಿದಂತ ಡಿ ದೇವರಾಜು ಅರಸುರವರು ದೀನದಲಿತರ ಬಾಳಿಗೆ ಬೆಳಕನ್ನು ಚೆಲ್ಲಿದ ಮಹಾನ ವ್ಯಕ್ತಿ ಎಂದರು. 

ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಡಾ.ವೈ.ಎಮ್ ಯಾಕೊಳ್ಳಿ ಮಾತನಾಡಿ, ಡಿ ದೇವರಾಜ ಅರಸುರವರು ಮಾದರಿಯಾದ ಮುಖ್ಯ ಮಂತ್ರಿಗಳಾಗಿ ಜನಸೇವೆಯನ್ನು ಮಾಡಿದಂತ ವ್ಯಕ್ತಿಯಾಗಿದ್ದಾರೆ ಎಂದರು. ತಂದೆ ಕೃಷಿಕರಾಗಿದ್ದರಿಂದ ಅವರು ಕೃಷಿಗೆ ಹೆಚ್ಚು ಮಹತ್ವ ಕೊಡುವದರ ಜೊತೆಗೆ ಶೋಷಿತ ವರ್ಗದವರ ಧ್ವನಿಗೆ ಸ್ಪಂದಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ದೀನದಲಿತರ ಉದ್ಧಾರಕರಾಗಿ ಅಧಿಕಾರ ನಿರ್ವಹಿಸಿದ ಮಹಾನಾಯಕ ಎಂದರು. 

ತಾಲೂಕಾ ಆಡಳಿತ ಹಾಗೂ ತಾಲೂಕಾ ಹಿಂದೂಳಿದ ವರ್ಗಗಳ ಇಲಾಖೆ ವತಿಯಿಂದ ಶಾಸಕ ವಿಶ್ವಾಸ ವಸಂತ ವೈದ್ಯರವರನ್ನು,  ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರನ್ನು ಮತ್ತು ತಾಲೂಕಾ ಹಿಂದೂಳಿದ ವರ್ಗಗಳ ಇಲಾಖೆ ಅಧಿಕಾರಿ ಆರ್‌.ಎಸ್‌.ಪಾಟೀಲ, ಡಾ.ವೈ.ಎಮ್‌.ಯಾಕೊಳ್ಳಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ವಸತಿ ನಿಲಯಗಳಲ್ಲಿ ಉಳಿದು ವ್ಯಾಸಂಗ ಮಾಡಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಸಮಾಜ ಸೇವಕರನ್ನು, ರೈತರನ್ನು, ಹಿಂದೂಳಿದ ವರ್ಗಗಳ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು  

ತಹಶಿಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪುರಸಭೆ ಮುಖ್ಯಾಧಿಕಾರಿ ಪಿ.ಎಮ್‌.ಚನ್ನಪ್ಪನವರ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ರವಿಂದ್ರ ಯಲಿಗಾರ, ಪಕ್ಕೀರ​‍್ಪ ಹದ್ದಣ್ಣವರ, ಬಿ.ಟಿ.ಆಯಟ್ಟಿ ದ್ಯಾಮಣ್ಣಾ ಸುತಗಟ್ಟಿ, ಅರ್ಜುನ ಅಮ್ಮೋಜಿ, ಬಿಇಓ ಮೋಹನ ದಂಡಿನ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಆರ್‌.ಆರ್‌.ಕುಲಕರ್ಣಿ, ಅಭಿಯಂತರ ಎಮ್‌.ಜಿ.ತಳವಾರ, ಮೈತ್ರಾದೇವಿ ವಸ್ತ್ರದ, ಆನಂದಕುಮಾರ ಮೂಗಬಸವ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ತಾಲೂಕಾ ಹಿಂದೂಳಿದ ವರ್ಗಗಳ ಇಲಾಖೆ ಅಧಿಕಾರಿ ಆರ್‌.ಎಸ್‌.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 


ಸುದ್ದಿ ಓದಿ