ರಾಷ್ಟ್ರೀಯ

ತಮಿಳುನಾಡಿಗೆ ತಪ್ಪದ ಚಂಡಮಾರುತದ ಕಾಟ ...!!

ತಮಿಳುನಾಡಿಗೆ ತಪ್ಪದ  ಚಂಡಮಾರುತದ  ಕಾಟ ...!!

ಚೆನ್ನೈ , ಡಿಸೆಂಬರ್ 7: ತಮಿಳುನಾಡಿಗೆ ನಿವಾರ್, ಬುರೆವಿ ಚಂಡಮಾರುತದ ಬಳಿಕ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.  ಮುಂದಿನ ದಿನಗಳಲ್ಲಿ ರಾಜ್ಯಕ್ಕೆ  ಅರ್ನಬ್   ಎಂಬ ಹೊಸ ಚಂಡಮಾರುತ ಅಪ್ಪಳಿಸಲಿದ್ದು, ಸದ್ಯಕ್ಕೆ  ಚಂಡ ಮಾರುತದ ಕಾಟದಿಂದ ರಾಜ್ಯಕ್ಕೆ ಮುಕ್ತಿಯಿಲ್ಲವೆನೋ ಎಂಬ ಆತಂಕ  ಕಾಡಲಾರಂಭಿಸಿದೆ.

ಈ ಕುರಿತು  ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಈ ಚಂಡಮಾರುತ ಉಂಟಾಗಲಿದ್ದು, ಭಾರತ ಬಾಂಗ್ಲಾದೇಶ ಸೇರಿದಂತೆ 13 ದೇಶಗಳು ವರದಿ ಮಾಡಿರುವ ಚಂಡಮಾರುಗಳ ಪೈಕಿ ಅರ್ನಬ್ ಚಂಡಮಾರುತ ಒಂದಾಗಿದ್ದು, ಮುಂದಿನ ದಿನಗಳಲ್ಲಿ ಅರ್ನಬ್ ಚಂಡಮಾರುತ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಲಿದೆ ಎನ್ನಲಾಗಿದೆ.

ನಿವಾರ್, ಬುರೆವಿ ಚಂಡಮಾರತದಿಂದ ತತ್ತರಿಸಿರುವ ತಮಿಳುನಾಡಿಗೆ ಇದೀಗ ಅರ್ನಬ್ ಚಂಡಮಾರುತ ಮತ್ತಷ್ಟು ಆತಂಕ- ಭೀತಿ ಉಂಟು ಮಾಡುತ್ತಿದೆ. 

ಸುದ್ದಿ ಓದಿ