ರಾಣೆಬೆನ್ನೂರ

ಬಿಜೆಪಿ ಯುವ ಮೋರ್ಚಾದಿಂದ ರಾಷ್ಟ್ರ ಭಕ್ತಿ ಜಾಗೃತಿಗಾಗಿ ಸೈಕಲ್ ಜಾಥಾ

ಬಿಜೆಪಿ ಯುವ ಮೋರ್ಚಾದಿಂದ ರಾಷ್ಟ್ರ ಭಕ್ತಿ ಜಾಗೃತಿಗಾಗಿ ಸೈಕಲ್ ಜಾಥಾ

ರಾಣೀಬೆನ್ನೂರ  13: 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ದಿ. 15ರಂದು ಬೆಳಿಗ್ಗೆ 10-00ಕ್ಕೆ ರಾಷ್ಟ್ರ ಭಕ್ತಿ ಜಾಗೃತಿಗಾಗಿ ಸೈಕಲ್ ಜಾಥಾವನ್ನು ಏರಿ​‍್ಡಸಲಾಗಿದೆಂದು ಯುವ ಮುಖಂಡ ಅಜೇಯ ಮಠದ ಅವರು ಹೇಳಿದ್ದಾರೆ. ರಾಜ್ಯ ಯುವ ಮೋಚಾ ಘಟಕದ ಕರೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು ರಾಜಕೀಯೇತರ ಕಾರ್ಯಕ್ರಮ ಇದಾಗಿದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಇಂದು ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ ಕೋರಿದ್ದಾರೆ. 

ಜಿಲ್ಲಾ ಯುವ ಮೋಚಾದ ಅಧ್ಯಕ್ಷ ಪವನ್ ಮಲ್ಲಾಡದ ಅವರು ಮಾತನಾಡಿ ಸೈಕಲ್ ಜಾಥಾ ತಾಲೂಕಿನ ಎರಡು ಕಡೆ ಆಯೋಜಿಸಿದ್ದು ನಗರದ ಪೋಸ್ಟ್‌ ಸರ್ಕಲ್‌ನಲ್ಲಿ ಹಾಗೂ ಗ್ರಾಮ ಮಂಡಲದಲ್ಲಿ ಆಯೋಜಿಸಲಾಗಿದೆ. ಕರೋನಾ ಸಂದರ್ಭದಲ್ಲಿ ಯುವ ಮೋರ್ಚಾ ಘಟಕವು ಸರ್ವ ರೀತಿಯಿಂದ ತಾಲೂಕ ಅಧಿಕಾರಿಗೆ, ನೊಂದವರಿಗೆ ಸಹಾಯ ಹಸ್ತ ಚಾಚಿ ಶ್ರಮಿಸಿದೆ. ಈಗ 3ನೇ ಅಲೆಯ ಭೀತಿಯಿದ್ದು ಈ ಹಿನ್ನಲೆಯಲ್ಲಿ ಸಾಮಜಿಕ ಅಂತರ ಕಾಯ್ದುಕೊಂಡು ಕೇವಲ 100ಜನ ಸೈಕಲ್ ರಾ​‍್ಯಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಪೊಸ್ಟ್‌ ಸರ್ಕಲ್ ನಲ್ಲಿ ನಡೆಯುವ ಸಮಾರಂಭದಲ್ಲೂ ಎಚ್ಚರಿಕೆ ವಹಿಸಿದ್ದು ವೇದಿಕೆಯಲ್ಲಿ ಓರ್ವರು ಮಾತನಾಡಿದ ನಂತರ ಮತ್ತೊಬ್ಬರು ವೇದಿಕೆಗೆ ಹೋಗಿ ಮಾತನಾಡುವಂತೆ ಅವಕಾಶ ಕಲಿಸಿದ್ದು ರಾಷ್ಟ್ರ ಭಕ್ತಿ-ಆತ್ಮಾಭಿಮಾನ ಜಾಗೃತಿಯ ಯುವ ಸಂಕಲ್ಪ ಯಾತ್ರೆಯ ಈ ಕಾರ್ಯಕ್ರಮಕ್ಕೆ ಸರ್ವರೂ ಸಹಕರಿಸಬೇಕೆಂದು ಅವರು ಕೋರಿದರು. ಗೋಷ್ಠಿಯಲ್ಲಿ ಡಾ. ಬಿ.ಎಸ್‌.ಕೇಲಗಾರ, ದೀಪಕ್ ಹರಪನಹಳ್ಳಿ, ಭಾರತಿ ಜಂಬಗಿ, ಶಿವು ಅಸುಂಡಿ ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ