ಗ್ರಾಹಕರು ಮೋಸಕ್ಕೆ ಒಳಗಾಗದೆ ತೆತ್ತ ಬೆಲೆಗೆ ರಸೀದಿ ಪಡೆಯಬೇಕು: ಏಕಾಂತ ಮುದಿಗೌಡ್ರ
ರಾಣೇಬೆನ್ನೂರು 26: ಯಾವುದೇ ವ್ಯಾಪಾರ ವ್ಯವಹಾರ ಮಾಡಿದರೆ ಅದಕ್ಕೆ ಗ್ರಾಹಕರು ಸರಿಯಾದ ರೀತಿಯಲ್ಲಿ ತೆತ್ತ ಬೆಲೆಗೆ ರಸೀದಿಯನ್ನು ಪಡೆಯಬೇಕು. ಇದು ಗ್ರಾಹಕರ ಹಕ್ಕು ಸಹ ಆಗಿದೆ ಎಂದು ಹಿರಿಯ ನ್ಯಾಯವಾಧಿ, ನೋಟರಿ ಏಕಾಂತ ಮುದಿಗೌಡ್ರ ಹೇಳಿದರು.
ಅವರು ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗ್ರಾಹಕರ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದರು. ನಿತ್ಯದ ವ್ಯಹಾರಿಕ ಬದುಕಿನಲ್ಲಿ ಇಂದು ಗ್ರಾಹಕರು ಒಂದಿಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಶೋಷಣೆಯಿಂದ ಮುಕ್ತರಾಗಬೇಕಾದರೆ ಗ್ರಾಹಕರು ಪರಿಪೂರ್ಣ ಜಾಗೃತರಾಗಬೇಕು ಅಂದಾಗ ಮಾತ್ರ ಈ ಶೋಷಣೆಯಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ್ ಅವರು ಮಾತನಾಡಿ, ಸಮಾಜದಲ್ಲಿ ಸಮಾನತೆ ಕಾಣಬೇಕಾದರೆ ವ್ಯವಹಾರದಲ್ಲಿ ಜ್ಞಾನವನ್ನು ಹೊಂದಬೇಕು. ಎಷ್ಟೇ ಜ್ಞಾನವನ್ನು ಹೊಂದಿದರೂ ಸಹ ಗ್ರಾಹಕರು ವ್ಯವಹಾರಸ್ಥರಿಂದ ಮೋಸಕ್ಕೆ ಒಳಗಾಗುವುದು ತಪ್ಪುತ್ತಿಲ್ಲ. ಎಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯ ವರೆಗೂ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಮೋಸ ವಂಚನೆಗೆ ಒಳಗಾಗುತ್ತಾರೆ. ಹೀಗಾಗಿ ಗ್ರಾಹಕರಿಗೆ ಗ್ರಾಹಕ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವುದು ಇಂದಿನ ಬಹು ಅಗತ್ಯವಿದೆ ಎಂದರು.ವೇದಿಕೆಯಲ್ಲಿ ಕಾಲೇಜು ಉಪನ್ಯಾಸಕರು, ಶಿಕ್ಷಕರು, ಗಣ್ಯರು ಉಪಸ್ಥಿತರಿದ್ದರು.
ಭೂಮಿಕಾ ಹುಲ್ಮನಿ ಪ್ರಾರ್ಥಿಸಿದರು. ಪ್ರೊ. ವೀರಣ್ಣ ಸಿ.ಕೆ ಸ್ವಾಗತಿಸಿದರು. ಸುಜಾತಾ ಹುಲ್ಲೂರು ಅತಿಥಿಗಳನ್ನು ಪರಿಚಯಿಸಿದರು. ಶಿವಾ ಅಂಜುಂ ಕಲಕೋಟಿ ನಿರೂಪಿಸಿ ವಂದಿಸಿದರು.