ರಾಷ್ಟ್ರೀಯ

ದೇಶದಲ್ಲಿ ಕೊರೊನಾ ಸೋಂಕಿತರ ಗುಣಮುಖ ಪ್ರಮಾಣ ಶೇ೪೧.೨೮ ರಷ್ಟು ಏರಿಕೆ

ದೇಶದಲ್ಲಿ ಕೊರೊನಾ ಸೋಂಕಿತರ  ಗುಣಮುಖ ಪ್ರಮಾಣ ಶೇ೪೧.೨೮ ರಷ್ಟು ಏರಿಕೆ

ನವದೆಹಲಿ, ಮೇ ೨೫, ದೇಶದಲ್ಲಿ ಈವರೆಗೆ   ಒಟ್ಟು ೫೪,೪೪೦ ಕೋವಿಡ್-೧೯ ರೋಗಿಗಳನ್ನು ಗುಣಪಡಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ೨, ೬೫೭ ರೋಗಿಗಳು ಗುಣಮುಖಹೊಂದಿದ್ದಾರೆ.  ದೇಶದಲ್ಲಿ  ಸೋಂಕು  ಪೀಡಿತರ ಚೇತರಿಕೆ  ಪ್ರಮಾಣ  ಶೇ.೪೧.೨೮ರಷ್ಟಿದೆ.  ನಿನ್ನೆಯಿಂದ, ಭಾರತದಲ್ಲಿ ಕೋವಿಡ್-೧೯ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ೬೭೬೭ ಹೆಚ್ಚಳವಾಗಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ ೧,೩೧,೮೬೮ಕ್ಕೆ ಏರಿದೆ. ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಪ್ರಕರಣಗಳ ಸಂಖ್ಯೆ ೭೩,೫೬೦ ರಷ್ಟಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್   ಭಾನುವಾರ  ಕೋವಿಡ್-೧೯ ಮೀಸಲು ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ದೆಹಲಿಯ ಚೌಧರಿ ಬ್ರಹ್ಮ ಪ್ರಕಾಶ್ ಆಯುರ್ವೇದ ಚರಕ್ ಸಂಸ್ಥಾನ್ ಗೆ ಭೇಟಿ ನೀಡಿ ಪ್ರಕರಣಗಳ ನಿರ್ವಹಣೆಯನ್ನು ಪರಿಶೀಲಿಸಿದರು.  ಸಚಿವರು  ವಿವಿಧ ಸೌಲಭ್ಯಗಳು ಮತ್ತು ವಾರ್ಡ್ ಗಳಿಗೂ  ಭೇಟಿ ವೀಕ್ಷಿಸಿದರು.
ಆಯುಷ್ ಸಚಿವಾಲಯದ  ಸೂಚನೆಯಂತೆ  ಸಮಗ್ರ ವಿಧಾನದ ಮೂಲಕ ಕೋವಿಡ್-೧೯ ರೋಗಿಗಳಿಗೆ ಮೊದಲ ಬಾರಿಗೆ ಚಿಕಿತ್ಸೆ ಕಲ್ಪಿಸುತ್ತಿರುವುದನ್ನು  ಸಚಿವರು ಖುದ್ದು ವೀಕ್ಷಿಸಿದರು. ಪ್ರತ್ಯೇಕ ಕೋವಿಡ್ ಆರೋಗ್ಯ ಕೇಂದ್ರಗಳು ಆಸ್ಪತ್ರೆಗಳಾಗಿದ್ದು,  ಇವು ಪ್ರಾಯೋಗಿಕವಾಗಿ ಮಧ್ಯಮ ಎಂದು ಹೇಳಲಾದ ಎಲ್ಲಾ ಪ್ರಕರಣಗಳಿಗೆ ಆರೈಕೆ ನೀಡುತ್ತವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಂತರರಾಷ್ಟ್ರೀಯ ಪ್ರಯಾಣಿಕರ ಆಗಮನಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸುದ್ದಿ ಓದಿ