ಶಿಗ್ಗಾವ್

ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮ

ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 29: ದೂರದರ್ಶನ ಮಾಧ್ಯಮಕ್ಕೆ ಮಕ್ಕಳನ್ನು ಕಳಿಸಬೇಕೆಂದರೆ ಅದರ ಪೂರ್ವ ತಯಾರಿಕೆಯ ಕಲಿಕೆಯ ಬಗ್ಗೆ ಸಂಪೂರ್ಣ ಅರಿವು ಅವಶ್ಯಕ ಎಂದು ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ ಹೇಳಿದರು.

ಪಟ್ಟಣದ ಜಯನಗರದ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನಟರಾಜ ನಾಟ್ಯ ಶಾಲೆ ವತಿಯಿಂದ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಲೆಯು ನಿರಂತರ ಪ್ರಯತ್ನದಿಂದ ಕರಗತ ಮಾಡಿಕೊಳ್ಳಲು ಸಾಧ್ಯ ಆ ನಿಟ್ಟಿನಲ್ಲಿ ನಟರಾಜ ನಾಟ್ಯ ಶಾಲೆ ಪಟ್ಟಣದಲ್ಲಿ ಭರತ ನಾಟ್ಯ ಕಲಾವಿದರ ಶ್ರೇಯೋಭಿವೃದ್ದಿಗಾಗಿ ಪಣತೊಟ್ಟಿದೆ ಎಂದರು.

ಉಪನ್ಯಾಸಕ ಶಶಿಕಾಂತ ರಾಠೋಡ ಮಾತನಾಡಿ ಮಕ್ಕಳಿಗೆ ನೃತ್ಯದಿಂದಾಗುವ ಪ್ರಯೋಜನಗಳು ಆಗಾದವಾದದ್ದು ನೃತ್ಯ ಅಭ್ಯಾಸ ತಾತ್ಕಾಲಿಕವಾಗಿರದೇ ನಿರಂತರ ಅಭ್ಯಾಸವಾಗಿರುತ್ತದೆ ಪಾಲಕರು ಇದನ್ನು ಗಮನಿಸಿ ಮಕ್ಕಳಿಗೆ ನೃತ್ಯ ಕಲಿಕೆಗೆ ಉತ್ತೇಜನ ನೀಡಬೇಕು ಎಂದರು.

ವೀರಗಾಸಿ ಪುರವಂತಿಕೆ ಕಲಾವಿದ ಮಂಜುನಾಥ ಮಿರ್ಜೆ ಮಾತನಾಡಿ ಕಲೆಯು ಇದೊಂದು ಶಕ್ತಿ ಅವರವರ ಕಲೆಯ ಮೇಲೆ ಅವರ ಶಕ್ತಿ, ಯುಕ್ತಿ, ದೈರ್ಯ, ಸಾಹಸವನ್ನು ಕಲಾವಿದನ ಮುಖಾಂತರ ಪ್ರಕರಗೊಳ್ಳುತ್ತವೆ ಇದಕ್ಕೆ ಪ್ರೇರಣೆ ಮಾರ್ಗದರ್ಶಕ ನೃತ್ಯ ಶಾಲೆಯ ಗುರು ಸಾಯಿಬಾಬಾ ಕಾಮನಹಳ್ಳಿ ಅಂತಹ ಉತ್ತಮ ಗುರುಗಳ ಮಾರ್ಗದರ್ಶನ ಅವಶ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ನಟರಾಜ ನಾಟ್ಯ ಶಾಲೆ ಅಧ್ಯಕ್ಷಿಣಿ ಶಾಲಿನಿ ಕಾಮನಹಳ್ಳಿ, ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಎಲ್ಲ ಕಲಾವಿದರಿಗೆ ಜಗದೀಶ ಬನ್ನಿಕೊಪ್ಪ ಕಿರು ಬಹುಮಾನವನ್ನು ನೀಡಿ ಕಲಾವಿದರಿಗೆ ಪ್ರೋತ್ಸಾಹಿಸಿದ್ದಾರೆ. ಅಣ್ಣಪ್ಪ ಬಾರಕೇರ ಸ್ವಾಗತಿಸಿದರು, ಸಾಯಿಬಾಬಾ ಕಾಮನಹಳ್ಳಿ ವಂದಿಸಿದರು 

ಸುದ್ದಿ ಓದಿ