ರಾಣೆಬೆನ್ನೂರ

ಕುಪ್ಪೇಲೂರಲ್ಲಿ ಸಾಂಸ್ಕೃತಿಕ ಕಲಾ ವೈಭವ: ಶಾಸಕರ ಅಭಿನಂದನಾ ಸನ್ಮಾನ

ಕುಪ್ಪೇಲೂರಲ್ಲಿ ಸಾಂಸ್ಕೃತಿಕ ಕಲಾ ವೈಭವ: ಶಾಸಕರ ಅಭಿನಂದನಾ ಸನ್ಮಾನ

ರಾಣೇಬೆನ್ನೂರ 20: ತಾಲೂಕಿನ ಕಲಾವಿದರ ತವರೂರಾದ ಕುಪ್ಪೇಲೂರ ಗ್ರಾಮದ ಮಾರುತಿ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ, ಸ್ಥಳೀಯ ರಂಗಚೇತನ (ಪ.ಜಾ) ಸಂಸ್ಥೆ ಆಯೋಜಿಸಿದ್ದ ಸಾಂಸ್ಕೃತಿಕ ಕಲಾವೈಭವ ಜನಪದ ಸಂಸ್ಕೃತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ ಅವರನ್ನು ಸಂಸ್ಥೆಯ ಅಧ್ಯಕ್ಷ ಗಣೇಶ ಗುಡಗುಡಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಸುಧಾಕರ ಮರಳಪ್ಪನವರ, ಪವನ ಮಲ್ಲಾಡದ, ಮಂಜುನಾಥ ಗೌಡಶಿವಣ್ಣನವರ, ಸಂತೋಷಕುಮಾರ ಪಾಟೀಲ, ಡಾ. ಮೋಹನ್ ಹಂಡೆ, ಡಾ.ಪ್ರವೀಣ ಖನ್ನೂರ ಸೇರಿದಂತೆ ಗ್ರಾಮದ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ