ರಾಣೆಬೆನ್ನೂರ

ವ್ಯಕ್ತಿತ್ವ ನಿರೂಪಣೆಗೆ ಸಾಂಸ್ಕ್ರತಿಕ ಚಟುವಟಿಕೆ ಅಗತ್ಯ: ಪ್ರಕಾಶ ಕೋಳಿವಾಡ

ವ್ಯಕ್ತಿತ್ವ ನಿರೂಪಣೆಗೆ ಸಾಂಸ್ಕ್ರತಿಕ ಚಟುವಟಿಕೆ ಅಗತ್ಯ: ಪ್ರಕಾಶ ಕೋಳಿವಾಡ

ಲೋಕದರ್ಶನ ವರದಿ 


ರಾಣೇಬೆನ್ನೂರು 16: ವಿಧ್ಯಾರ್ಥಿಗಳು ಕೇವಲ ನಾಲ್ಕು ಗೂಡೆಗಳ ಮಧ್ಯ ನಡೆಯುವ ಪಾಠ ಪ್ರವಚನಗಳಿಗೆ ಮಾತ್ರ ಸಿಮಿತವಾಗದೆ ಅವರಲ್ಲಿರುವ ಆಂತರಿಕ ಗೌಪ್ಯ ಪ್ರತಿಭೆಯನ್ನು ಅಭಿವ್ಯಕ್ತಿಗೂಳಿಸಲು ಸಾಂಸ್ಕ್ರುತಿಕ ಕಲೆಗಳ ಮೂಲಕ ಹೂರ ಬರಬೇಕಾದ ಇಂದಿನ ಅಗತ್ಯವಿದೆ ಎಂದು ಪಿಕೆಕೆ ಇನಿಷಿಯೇಟಿವ್  ಅದ್ಯಕ್ಷ ಪ್ರಕಾಶ ಕೋಳಿವಾಡ ಹೇಳಿದರು.  

ಅವರು ಇಲ್ಲಿನ ಬಳ್ಳಾರಿ ಕಲ್ಯಾಣಮಂಟಪದಲ್ಲಿ ಇತ್ತಿಚೇಗೆ ಪಿಕೆಕೆ ಮತ್ತು ಬೆಂಗಳೂರು ರೇವಾ ವಿಶ್ವ ವಿಧ್ಯಾಲಯ ಆಯೋಜಿಸಿದ್ದ ಪ್ರತಿಭಾನ್ವೇಷಣ ಸಾಂಸ್ಕ್ರುತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಶಿಕ್ಷಣದ ಜೂತೆ ಜೂತೆಗೆ ನಮ್ಮ ವಿಧ್ಯಾರ್ಥಿಗಳು ಸಾಂಸ್ಕ್ರುತಿಕವಾಗಿ ತಮ್ಮ ಪ್ರತಿಭೆಯನ್ನು ಸಾರ್ವಜನಿಕರಿಗೆ ತೂರಿಸುವುದರ ಮೂಲಕ ತಮ್ಮಲ್ಲಿರುವ ವ್ಯಕ್ತಿತ್ವವನ್ನು ನಿರೂಪಿಸಿಕೂಳ್ಳಬೇಕು ಎಂದ ಪ್ರಕಾಶ ಅವರು ಇಗಾಗಲೇ ರಾಜಧಾನಿಯಲ್ಲಿ ರೇವಾ ವಿವಿ ಮತ್ತು ಪಿಕೆಕೆ ಅನ್ವೇಷಣ ಕ್ಲಬ್ ಪ್ರಾರಂಬಿಸಲಾಗಿದ್ದು ಇದರಿಂದ ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕ್ರುತಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ರೇವಾ ವಿವಿ ವ್ಯವಸ್ಥಾಪಕ ಅಜಯ್ ಭಾಸ್ಕರ್ ರೆಡ್ಡಿ ಅವರು ಮಕ್ಕಳು ಸಾಂಸ್ಕ್ರುತಿಕವಾಗಿ ಬೆಳದಾಗ ಮಾತ್ರ ಅವರಲ್ಲಿ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ ಎಲ್ಲರಲ್ಲೂ ಪ್ರತಿಭೆ ಇದೆ ಅಭಿವ್ಯಕ್ತಿಗೂಳಿಸಲು ರೇವಾದಲ್ಲಿ ಕ್ಲಬ್ ಅನ್ನು ಸ್ಥಾಪಿಸಲಾಗಿದೆ ನಾಡಿನ ಯಾವುದೇ ಭಾಗದಲ್ಲಿರುವ ಪ್ರಾದೇಶಿಕ ಕಲೆ ಮತ್ತು ಕಲಾ ಪರಂಪರೆಯನ್ನು ಪ್ರದರ್ಶಿಸಲು ವೇದಿಕೆ ಸಿದ್ದವಾದ್ದು ಯಾವುದೇ ಕಾಲೇಜಿನ ವಿಧ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ನಾಗಶಾಂತಿ ಆಡಳಿತಾಧಿಕಾರಿ ಬಿ.ಬಿ.ನಂದ್ಯಾಲ್, ಉನ್ನತಿ ಕಾಲೇಜು ಅಧ್ಯಕ್ಷ ಬಸವರಾಜ ಪಾಟೀಲ, ಗುಪ್ತಾ ಕಾಲೇಜು ಅದ್ಯಕ್ಷ ವಾಸು ಸಾವುಕಾರ, ಕಲಾವಿದೆ ಅನಸುಯಾ ರಾಠೂಢ, ಕೇಂಬ್ರಿಡ್ಜ್‌ ಅಧ್ಯಕ್ಷ ಇುರ್ಷಾದ್ ಬಳ್ಳಾರಿ ಸೇರಿದಂತೆ ಮತ್ತಿತರ ಗಣ್ಯರು ಮಾತನಾಡಿದರು. ರಕ್ಷಾ ಶ್ರೇಯಾದಿಕ್ಷಿತ್ ಭರತನಾಟ್ಯ ಪ್ರದರ್ಶಿಸಿದರು. ಶ್ರದ್ದಾ ಅಕ್ಷಯ್ ನಾಡಗೀತೆ ಹಾಡಿದರು, ಇರ್ಫಾನ್ ದಿಡಗೋರ್ ಸ್ವಾಗತಿಸಿದರು. ಹರ್ಷಾ ಸಂಗಮೇಶ ನಿರೂಪಿಸಿ ಶ್ರೀಕಾಂತ ಎಂ ವಂದಿಸಿದರು. 

ಸ್ಪರ್ದಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೂಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ಪಾರಿತೂಷಕ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. 


ಸುದ್ದಿ ಓದಿ