ಸದ್ರಿ ಕ್ರಶರ್ ನಿಂದ ನಾವು ಬೆಳೆದ ಬೆಳೆಗಳಿಗೆ ಇಳುವರಿ ಕುಂಟಿತ: ಕೆ.ಹನುಮಂತ ರೆಡ್ಡಿ
ಹೊಸಪೇಟೆ 13: 123/ಸಿ, ಕೆ.ಹನುಮಂತರೆಡ್ಡಿ ತಂದೆ: ಬಸಪ್ಪ,ರವರ ಹೊಲದ ಪಕ್ಕದಲ್ಲಿ ಎಸ್.ಆರ್.ಸಿ. ಕಂಪನಿಯ ಸಿಮೆಂಟ್ ಮಿಕ್ಷರ್ ಕ್ರಶರ್ ಪ್ಲಾಂಟ್ ಹಾಕಿರುತ್ತಾರೆ. ನಮ್ಮ ಹೊಲದಲ್ಲಿ ಜೋಳಾ, ತೊಗರಿ, ಮತ್ತು ಇನ್ನಿತರೆ ಅಕ್ಕಪಕ್ಕದ ಹೊಲದಗಳು ಮೆಕ್ಕೆಜೋಳಾ ಇನ್ನಿತರೆ ಬೆಳೆಗಳು ಬೆಳೆದಿರುತ್ತಾರೆ. ಆದರೆ ಸದ್ರಿ ಕ್ರಶರ್ ನಿಂದ ನಾವು ಬೆಳೆದ ಬೆಳೆಗಳಿಗೆ ಇಳುವರಿ ಕುಂಟಿತವಾಗಿರುತ್ತದೆ.
ಆ ಬೆಳೆಗಳ ಮೇಲೆ ದೂಳು ಮತ್ತು ರಾಸಾಯನಿಕ ಮಿಶ್ರಣದ ವಿಷ ಪದಾರ್ಥನ ಅನೀಲ ಸೇರೆ್ಡಯಾಗಿರುತ್ತದೆ. ಸದ್ರಿ ಕ್ರಶರ್ ನಿಂದ ರೈತರ ಬೆಳೆದ ಬೆಳೆಗಳು ನಾಶವಾಗುತ್ತಿದ್ದು ಮತ್ತು ನಾವು ಹೊಲಗಳಿಗೆ ಹೋದರೆ ದೂಳಿನಿಂದ ಕೆಮ್ಮು, ಹಸ್ತಮ, ತೆಲೆಸುತ್ತುವಿಕೆ, ಉಸಿರಾಟದ ತೊಂದರೆ ಮತ್ತು ಇನ್ನಿತರೆ ರೀತಿಗಳಿಂದ ಕಾಯಿಲೆ ತುತ್ತಾಗುತ್ತಿದ್ದು, ಮತ್ತು ನಮ್ಮ ಹೊಲಗಳಿಗೆ ಕೆಲಸ ಮಾಡಲು ಬೇರೆ ರೈತರು, ಕೂಲಿ ಹಾಳುಗಳು ಬರುವುದಿಲ್ಲವೆಂದು ಖಡಾಕಂಡಿತವಾಗಿ ಹೇಳಿರುತ್ತಾರೆ.
ಇದರಿಂದ ನಾವು ಹಲವಾರು ಬಾರಿ ಇದರ ಬಗ್ಗೆ ಸ್ಥಳೀಯ ಗ್ರಾಮಾಧಿಕಾರಿಗಳಿಗೆ ಮತ್ತು, ಹೊಸಪೇಟೆ ತಾಲೂಕು ಕಛೇರಿಗೆ, ಜಿಲ್ಲಾಧಿಕಾರಿಗಳ ಕಛೇರಿಗೆ ಮತ್ತು ವಾಯುಮಾಲಿನ್ಯ ನಿಯಂತ್ರಣಾಧಿಕಾರಿಗಳ ಕಛೇರಿಗೆ ತೆರಳಿ ಸದ್ರಿ ಕ್ರಶರ್ನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಮತ್ತು ಸದ್ರಿ ಕ್ರಶರ್ ಇರುವ ಜಾಗಕ್ಕೆ ಸೂಕ್ತ ರೀತಿಯ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿರುತ್ತೇವೆ. ಆದರೆ ಇದುವರೆಗೂ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ತುಂಬಾ ವಿಪರ್ಯಾಸದ ಸಂಗತಿಯಾಗಿದೆ.
ಆದ್ದರಿಂದ ಈ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸುವುದೇನೆಂದರೆ, ಈ ಮೂಲಕವಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು, ಸೂಕ್ತ ರೀತಿಯಾಗಿ ರೈತರಿಗೆ ಸಹಾಯಕ ರೀತಿಯಲ್ಲಿ ಮತ್ತು ಅವರ ಆರೋಗ್ಯಕ್ಕೆ ಯಾವುದೇ ರೀತಿಯಾಗಿ ತುತ್ತಾಗದಂತೆ ಕ್ರಮ ಜರುಗಿಸಬೇಕೆಂದು ಈ ಪತ್ರಿಕೆ ಪ್ರಕಟಣೆ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಮತ್ತು ಈ ಮನವಿ ಸಲ್ಲಿಸಿದ ನಂತರವು ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಎಲ್ಲಾ ರೈತರು ಸೇರಿ ಉಗ್ರವಾದ ಹೋರಾಟ ಮಾಡುತ್ತೇವೆಂದು ಈ ಮೂಲಕ ತಿಳಿಸುತ್ತಿದ್ದೇವೆ.