ಬೆಳೆ ಪರಿಹಾರ ವಿಳಂಬ: ಮೂಲಿಮನಿ ಆಕ್ರೋಶ
ಲೋಕದರ್ಶನ ವರದಿ
ಕುಷ್ಟಗಿ 24: ಇತ್ತೀಚೆಗೆ ನೆರೆ ಹಾವಳಿಯಿಂದ ನಾಶವಾದ ಬೆಳೆಗಳಿಗೆ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದ್ವೀಗುಣ ಬೆಳೆ ಪರಿಹಾರ ನೀಡಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ ಇದುವರೆಗೂ ಸರಕಾರದಿಂದ ಯಾವುದೇ ರೀತಿಯ ಪರಿಹಾರ ಬಂದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ನಜೀರಸಾಬ ಮೂಲಿಮನಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ನೆರೆ ಹಾವಳಿಯಿಂದ ತಾಲೂಕಿನ ರೈತರ ಬೆಳೆ ನಷ್ಟ ಪರಿಹಾರ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಇಲಾಖೆಯಿಂದ ತೆರೆದಿರುವ ತೊಗರಿ ಕರಿದಿ ಕೇಂದ್ರವನ್ನು ಸರಿಯಾಗಿ ನಿಭಾಯಿಸುವಂತೆ ಮತ್ತು ಕೆಪಿಟಿಸಿಎಲ್ನಿಂದ ತಾಲೂಕಿನಲ್ಲಿನ ವಿವಿಧ ರೈತರ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ಬೆಳಗ್ಗೆ ತಹಶೀಲ್ದಾರ ಕಚೇರಿ ಬಳಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿ ಮಾತನಾಡಿದ ಅವರು ಕುಷ್ಟಗಿ, ಹನುಮಸಾಗರ, ತಾವರಗೇರಿ ಭಾಗದಲ್ಲಿ ಜಿಲ್ಲಾ ಕೇಂದ್ರದಿಂದ ತೊಗರಿ ಕೇಂದ್ರವನ್ನು ಆರಂಭಿಸಲಾಗಿದೆ.
ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಸುತಿಲ್ಲ, ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.
ವಾರದಲ್ಲಿ ಎರಡು ದಿನ ಮಾತ್ರ ಕೇಂದ್ರವನ್ನು ತೆರೆಯುತ್ತಾರೆ ಇದರಿಂದ ರೈತರಿಗೆ ತುಂಬಾ ತೊಂದರೆ ಯಾಗಿದೆ.
ರೈತರ ಬೆಳೆದ ಉತ್ತಮ ತೊಗರಿಗಳನ್ನು ಕರೀದಿ ಮಾಡದೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು.
ಕೆಪಿಟಿಸಿಎಲ್ ಕಂಪನಿಯಿಂದ ಕುಷ್ಟಗಿ ಯಿಂದ ತಾವರಗೇರಿಯವರೆಗೊ ರಸ್ತೆಯ ಪಕ್ಕದ ಜಮೀನಿನಲ್ಲಿ ಬೃಹದಾಕಾರದ ವಿದ್ಯುತ್ ಕಂಬ ಹಾಗೂ ಕಾರಿಡಾರ್ಗಳನ್ನು ಹಾಕಲಾಗುತ್ತಿದ್ದು ಕಂಪನಿಯಿಂದ ರೈತರಿಗೆ ಯಾವುದೇ ರೀತಿಯ ಪರಿಹಾರ ಹಣ ನೀಡಿಲ್ಲ ಹಾಗೂ ಸುಜಲಾನ ವಿಂಡ್ ಪವರ್ ಕಂಪನಿಯವರು ಕಾನೂನಿನ ಅಡಿಯಲ್ಲಿ ಭೂ ಪರಿವರ್ತನೆ, ಸೇರಿದಂತೆ ಇನ್ನಿತರೆ ಅಧಿಕಾರಿಗಳ ಪರವಾನಗಿ ಪಡೆಯದೆ ಕಾಮಗಾರಿ ನಡೆಸುತ್ತಿದ್ದಾರೆ ತಹಸೀಲ್ದಾರ್ ಅವರು ಈ ಎಲ್ಲಾ ಅಂಶಗಳನ್ನು ಪರೀಶೀಲಿಸಿ ಕರ್ತವ್ಯ ಲೋಪ ಎಸಗಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರೈತರ ಆಶಾಕಿರಣವಾದ ಯಶಸ್ವಿನಿ ವೀಮಾ ಯೋಜನೆ ಮರು ಜಾರಿಗೆ ತರಬೇಕು ಹಾಗೂ ಈ ಮೇಲಿನ ಎಲ್ಲಾ ವಿಷಯಗಳನ್ನು ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರಕಾರವನ್ನು ಮನವಿ ಪತ್ರದ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಂಕರ ಬೀಳಗಿ, ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಇಟಗಿ, ಖಜಾಂಚಿ ಮಲ್ಲಪ್ಪ ಹವಾಲ್ದಾರ, ಕಾರ್ಯದರ್ಶಿ ಬಸಪ್ಪ ಅಮ್ಮಣ್ಣನವರ, ಪ್ರವೀಣಕುಮಾರ ಕೊರಡಕೇರಿ, ಶರಣಪ್ಪ ಬಾಚಲಾಪೂರ, ಯಂಕಣ್ಣ ಉಪ್ಪಳೇರ, ಮಹಾಂತಮ್ಮ ಪಾಟೀಲ, ವೆಂಕಟೇಶ ರಾಥೋಡ್, ಯಮನೂರ್ಪ ಮಡಿವಾಳರ, ಉಮೇಶ ಬಾಚಲಾಪೂರ ಸೇರಿದಂತೆ ಇನ್ನಿತರೆ ರೈತ ಮುಂಖಡರು ಭಾಗವಹಿಸಿದ್ದರು.