ಹೊಸಪೇಟೆ

ಫಸಲ್ ಬೀಮಾ ಯೋಜನೆ; ಬೆಳೆ ವಿಮೆ ನೋಂದಣಿಗೆ ಸೂಚನೆ

ಫಸಲ್ ಬೀಮಾ ಯೋಜನೆ; ಬೆಳೆ ವಿಮೆ ನೋಂದಣಿಗೆ ಸೂಚನೆ

ಹೊಸಪೇಟೆ ಜು.21: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಫಸಲ್ ಬೀಮಾ ಯೋಜನೆಯಡಿ ಬೆಳೆವಿಮೆ ನೊಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್‌. ಅವರು ತಿಳಿಸಿದ್ದಾರೆ. 

ವಿಜಯನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಆಶ್ರಿತ ಬೆಳೆ ತೊಗರಿ ಸೇರಿದಂತೆ ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಾದ ಮುಸುಕಿನ ಜೋಳ, ಜೋಳ, ಹತ್ತಿ, ಕೆಂಪು ಮೆಣಸಿನಕಾಯಿ, ಟೋಮ್ಯಾಟೊ, ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆದ ರೈತರು ಜು.31ರ ಒಳಗಾಗಿ ಬೆಳೆವಿಮೆ ನೋಂದಾಯಿಸಿಕೊಳ್ಳಬೇಕು.  

ನೀರಾವರಿ ಆಶ್ರಿತ ಬೆಳೆ ಭತ್ತ ಸೇರಿದಂತೆ ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ, ಸಜ್ಜೆ, ಮತ್ತು ರಾಗಿ ಹಾಗೂ ಮಳೆಯಾಶ್ರಿತ ಬೆಳೆಗಳಾದ ತೊಗರಿ, ನವಣೆ ಮತ್ತು ಹುರುಳಿ ಬೆಳೆಗಳಿಗೆ ಆ.16ರ ಒಳಗಾಗಿ ಯಾವುದೇ ಸ್ಥಳೀಯ ಬ್ಯಾಂಕ್ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.  

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಂರಕ್ಷಣೆ ಪೋರ್ಟಲ್  ತಿತಿತಿಚಿಟಡಿಚಿಚಿಟಿಜ.ಞಚಿಡಿಟಿಚಿಣಚಿಞಚಿ.ರಠ.ಟಿ ಬಳಸಬಹುದಾಗಿದೆ. 


ಸುದ್ದಿ ಓದಿ