ಜಮಖಂಡಿ

ಬಿದರಿ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷ: ಭಯಭೀತರಾದ ಗ್ರಾಮಸ್ಥರು

ಬಿದರಿ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷ: ಭಯಭೀತರಾದ ಗ್ರಾಮಸ್ಥರು

ಜಮಖಂಡಿ  22: ತಾಲೂಕಿನ ಬಿದರಿ ಗ್ರಾಮದ ನದಿ ತೀರದ ಬಳಿ ಮೊಸಳೆಯೊಂದು ಪ್ರತ್ಯಕ್ಷ ಕಂಡಿದನ್ನು ನೋಡಿ ಗ್ರಾಮಸ್ಥರು ಭಯಭೀತರಾದ ಘಟನೆ ನಡೆದಿದೆ. 

ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿರುವ ಹಿನ್ನಲೆಯ ನೀರಿಗಾಗಿ ಅರಸಿಕೊಂಡು  ಉರಿ ಬಿಸಿಲಿನ ತಾಪಕ್ಕೆ ಜಲಚರ ಪ್ರಾಣಿಗಳು ನದಿಯಿಂದ ಹೊರಗೆ ಬರುತ್ತಿದು. ನದಿಯ ತೀರದ ಪಕ್ಕದ ಹೊಲ, ಗದ್ದೆಗಳಿಗೆ ಅಲೆದಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಭಯಬೀತರಾಗಿದ್ದಾರೆ. ಕೆಲವಂದಿಷ್ಟು ಗ್ರಾಮಸ್ಥರು ಸೇರಿಕೊಂಡು ಮೊಸಳೆಯನ್ನು ಹಿಡಿಯಲು ಹರಸಾಹಸ ಪಡುವಂತೆ ಆಗಿತ್ತದೆ. 

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ. ಮೊಸಳೆಯನ್ನು ಹಿಡಿದು. ಆಲಮಟ್ಟಿ ಜಲಾಯಶಯಕ್ಕೆ ಬಿಡಲು ಹೋಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. 

ಅರಣ್ಯ ಇಲಾಖೆ ಅಧಿಕಾರಿ...... 

ನದಿಯ ತೀರದ ಗ್ರಾಮಸ್ಥರು ಮೊಸಳೆಯ ಇರುವದು ಕಂಡುಬಂದರೆ ಮಾಹಿತಿಯನ್ನು ನೀಡಬೇಕು. ಗ್ರಾಮಸ್ಥರು ಯಾರು ಮೊಸಳೆಯನ್ನು ಹಿಡಿಯು ಸಾಹಸಕ್ಕೆ ಮುಂದಾಗಬಾರದು. ಮೊಸಳೆಯನ್ನು ಹಿಡಿಯಲು ಹೋಗಿ ಅಪಾಯಕಾರಿ ಆಗುವ ಸಂಭವ ಇರುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ. ಮೊಸಳೆಯನ್ನು ಹಿಡಿಯಲು ಎಲ್ಲ ಸಲಕರಣೆಗಳು ಇರುತ್ತವೆ. ಯಾರು ಮೊಸಳೆಯನ್ನು ಹಿಡಿಯಲು ಮುಂದಾಗಬಾರದು. 

ಪವಣ ಕುರನಿಂಗ, 

ಜಮಖಂಡಿ ಅರಣ್ಯ ಇಲಾಖೆ ಅಧಿಕಾರಿ..... 

ತಾಲ್ಲೂಕಿನ ಬಿದರಿ ಗ್ರಾಮದ ನದಿ ತೀರದ ಬಳಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು. ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನು ಹಿಡಿದಿರುವುದು, 


ಸುದ್ದಿ ಓದಿ