ಯುವತಿಯರಿಗೆ ಸೈಬರ್ ಕ್ರೈಮ ಕುರಿತು ಜಾಗೃತಿ

ಯುವತಿಯರಿಗೆ ಸೈಬರ್ ಕ್ರೈಮ ಕುರಿತು ಜಾಗೃತಿ Creating awareness among young women about cybercrime

ಯಮಕನಮರಡಿ 18 : ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು ಯುವತಿಯರು ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆಗಳು, ಎಸ್ ಎಂ ಎಸ್ . ಇ-ಮೇಲ್, ವಾಟ್ಸ್‌ ಆಪ್ ಲಿಂಕಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಸೈಬರ ವಂಚನೆಗೆ ಒಳಗಾದಲ್ಲಿ ತಕ್ಷಣವೇ ರಾಷ್ಟ್ರೀಯ ಸೈಬರ್ ಸಹಾಯವಾಣಿಗೆ 1930 ಕರೆ ಮಾಡಿ ದೂರು ಸಲ್ಲಿಸಬೇಕೆಂದು ಎಫ್ ವಿ ಟಿ ಆರ್ ಎಸ್ ಸಂಸ್ಥೆಯ ಕ್ಷೇತ್ರ ಪಾಲಕರಾದ ಬಸವರಾಜ ಮಣ್ಣಿಕೇರಿ ಅಭಿಪ್ರಾಯಪಟ್ಟರು. ಎಫ್ ವಿ ಟಿ ಆರ್ ಎಸ್ ಸಂಸ್ಥೆ, ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಇವರ ಸಂಯುಕ್ತಾಶ್ರಯದಲ್ಲಿ ಹಿಡಕಲ್ ಡ್ಯಾಂನ ಶಕ್ತಿ ಸದನದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಡಿಜಿಟಲ್ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾಯಕ್ರಮದಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಸೈಬರ ಅಪರಾಧಿ ವರದಿ ಪರ್ಟಲ್ನಲ್ಲಿ ಆನಲೈನ ಮೂಲಕವು ದೂರು ಸಲ್ಲಿಸಬಹುದು ಯುವತಿಯರು ಡಿಜಿಟಲ್ ಸೇವೆಗಳನ್ನು ಸುರಕ್ಷಿತವಾಗಿ ಬಳಸುವ ಮೂಲಕ ಸೈಬರ್ ಅಪರಾಧಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಹಾಗೂ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಲ್ಲಿಯೂ ಜಾಗೃತಿ ಮೂಡಿಸಬೇಕೇಂದರು. ಕಾಯಕ್ರಮದಲ್ಲಿ ಶಕ್ತಿ ಸದನದ ಅಧೀಕ್ಷಕರಾದ ದ್ರಾಕ್ಷಾಯಿನಿ ಮಠಪತಿ, ಸುಗಂಧಾ ಅಳ್ಳಟ್ಟಿ ಹಾಗೂ ಹೊಲಿಗೆ ತರಬೇತುದಾರರಾದ ಮಂದಾಕಿನಿ ಹಟ್ಟಿಹೊಳಿ ಉಪಸ್ಥಿತರಿದ್ದರು.