ಕರೋನ ಮಣಿಸಲು ನವೆಂಬರ್ ನಲ್ಲಿ ಲಸಿಕೆ: ಪ್ರಸಾದ್
ನವದೆಹಲಿ, ಸೆಪ್ಟೆಂಬರ್ 18: ಮುಂದಿನ ನವಂಬರ್ ವೇಳೆಗೆ ದೇಶದ ಜನರು ಕರೋನ ಮಣಿಸಲು ಜನರು ಲಸಿಕೆ ಪಡೆಯಬಹುದಾಗಿದೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸಹ-ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಪ್ರಸಾದ್ ಹೇಳಿದ್ದಾರೆ .
ಈ ಕುರಿತು'ನಾವು ರಷ್ಯಾದ ಅಭಿವೃದ್ಧಿ ಹೂಡಿಕೆ ನಿಧಿಯೊಂದಿಗೆ (ಆರ್ಡಿಐಎಫ್) ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದು ಭಾರತಕ್ಕೆ ಆದಷ್ಟು ಬೇಗ ತರಲು ಆಶಿಸುತ್ತೇವೆ ಎಂದರು.
ಲಸಿಕೆ ಪ್ರಯತ್ನವು ಅಪಾರ ಮತ್ತು ಅಭೂತಪೂರ್ವವಾಗಿದೆ, ಪ್ರತಿ ಕಂಪನಿಯು ವಿಭಿನ್ನ ವಿಧಾನವನ್ನು ಪ್ರಯತ್ನಿಸುತ್ತಿದೆ. ನಿಯಂತ್ರಕ ಅಧಿಕಾರಿಗಳ ಅನುಮೋದನೆಗೆ ಒಳಪಟ್ಟು ನವೆಂಬರ್ ವೇಳೆಗೆ ನಾವು ವಾಕ್ಸಿನ್ ಗಳನ್ನು ಹೊಂದಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.