ರಾಷ್ಟ್ರೀಯ

ಮಾರ್ಚ್ ವೇಳೆಗೆ ಕೊರೋನ ಲಸಿಕೆ ವಿತರಣೆಗೆ ಚಾಲನೆ

ಮಾರ್ಚ್ ವೇಳೆಗೆ ಕೊರೋನ ಲಸಿಕೆ ವಿತರಣೆಗೆ ಚಾಲನೆ

ನವದೆಹಲಿ, ನವೆಂಬರ್ 23: ದೇಶದಲ್ಲಿ ಕೊರೋನ  ಲಸಿಕೆ ಉಪಯೋಗ ಕುರಿತು ನಡೆಸಿರುವ ವೈದ್ಯಕೀಯ ಸಂಶೋಧನಾ ಕಾರ್ಯ  ಎರಡು ತಿಂಗಳಿನಲ್ಲಿ ಪೂರ್ಣಗೊಂಡು ಮುಂದಿನ  ಮಾರ್ಚ್ ವೇಳೆಗೆ ಲಸಿಕೆ ಸಾರ್ವಜನಿಕ ವಿತರಣೆ, ಬಳಕೆಗೆ  ಸಿಗಲಿದೆ ಎಂಬ ಆಶಯವನ್ನು  ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ವ್ಯಕ್ತಪಡಿಸಿದ್ದಾರೆ.

 

ನವೆಂಬರ್ ತಿಂಗಳಿನಲ್ಲೇ ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಜಂಟಿಯಾಗಿ ಮೂರನೇ ಹಂತದ ವೈದ್ಯಕೀಯ ಪ್ರಯೋಗ  ನಡೆಸಲಿದೆಎಂದರು . ಕೊವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗದಲ್ಲಿ ಈ ಬಾರಿ 26 ಸಾವಿರ  ಸ್ವಯಂಸೇವಕರ ಮೇಲೆ   ಪ್ರಯೋಗ ನಡೆಸಲಾಗುತ್ತದೆ  ಎಂದು ಅವರು ಹೇಳಿದ್ದಾರೆ.

 

ಇನ್ನೊಂದು ತಿಂಗಳು ಅಥವಾ ಎರಡು ತಿಂಗಳಿನಲ್ಲಿ ದೇಶೀಯ ಕೊರೋನ  ಸೋಂಕು   ಲಸಿಕೆಯ ವೈದ್ಯಕೀಯ ಪರೀಕ್ಷಾ ಪ್ರಯೋಗ ಪೂರ್ಣಗೊಳ್ಳಲಿದೆ ಎಂದರು. ಜುಲೈ ತಿಂಗಳ ವೇಳೆಗೆ 20 ರಿಂದ 25 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ.  ಆರಂಭಿಕ ಹಂತದಲ್ಲಿ ವೃದ್ಧರು ಮತ್ತು ಕೊರೊನಾ ವಾರಿಯರ್ ಗಳಿಗೆ ಮೊದಲು  ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಸುದ್ದಿ ಓದಿ