ಕೋವಿಡ್ ಉಲ್ಬಣದಿಂದ ಕೆಎಎಸ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳ ಕನಸು ಬಂಗ: ಪ್ರಭಾಕರ ಚಿಣಿ
ಕುಷ್ಟಗಿ 30: ಮಹಾಮಾರಿ ಕೋವಿಡ್ ರೋಗ ರಾಜ್ಯದಲ್ಲಿ ಅತೀಹೆಚ್ಚು ಹರಡುವದರಿಂದ ಉನ್ನತ ವ್ಯಾಸಂಗ ಪಡೆಯುತ್ತಿರುವ ತಾಲೂಕಿನ ವಿದ್ಯಾರ್ಥಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ ಎಂದು ಬೆಂಗಳೂರಿನ ಪಂಚಾಯತ್ ರಾಜ್ಯ ಇಲಾಖೆಯ ನಿವೃತ್ತ ಪ್ರಧಾನ ಇಂಜೀನೀಯರ ಪ್ರಭಾಕರ ಚಿಣಿ ಕಳವಳ ವ್ಯಕ್ತಪಡಿಸಿದರು.
ಪ್ರಭಾಕರ ಚಿಣಿ ಅಭಿಮಾನಿ ಬಳಗದವರಿಂದ ರವಿವಾರ ಬೆಳಿಗ್ಗೆ ಇಲ್ಲಿನ ಸರ್ಕೂಟ್ ಹೌಸ್ ನಲ್ಲಿ ಏರಿ್ಡಸಿದ್ದ 2022 ಸಾಲಿನ ಪಾಕ್ಯೇಟ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕುಷ್ಟಗಿ ತಾಲೂಕು ರಾಜ್ಯದಲ್ಲಿ ಬರಪೀಡಿತ ಪ್ರದೇಶವಾಗಿದೆ.
ಇಲ್ಲಿನ ಜನರು ಉನ್ನತ ಶಿಕ್ಷಣವನ್ನು ಪಡೆದು ಕೆಎಎಸ್, ಐಎಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉನ್ನತ ಸ್ಥಾನವನ್ನು ತಲುಪಬೇಕು ಎಂಬ ಮಹದಾಸೆ ನನ್ನದಾಗಿದೆ.
ಮುಂದಿನ ದಿನಮಾನಗಳಲ್ಲಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಧನೆಗಾಗಿ ತಾಲೂಕಿನಲ್ಲಿ ಪ್ರಭಾಕರ ಚೀಣಿ ಅಭಿಮಾನಿ ಬಳಗದವರಿಂದ ಉನ್ನತ ಮಟ್ಟದ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಭರವಸೆ ನೀಡಿದರು.
ಅಪರ್ ತುಂಗಾ ಪ್ರೋಜೆಕ್ಟ್ ಈಗಾಗಲೇ ಕೇಂದ್ರ ಸರಕಾರ ಗೋಷಣೆ ಮಾಡಿದೆ ಈ ಯೋಜನೆ ಕಾರ್ಯ ಗತವಾಗಲ ನಾವು ನೀವು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಇಂದಿನ ಮುಖ್ಯಮುಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಷ್ಟಗಿ ಭಾಗವನ್ನು ನೀರಾವರಿ ಪ್ರದೇಶವನ್ನು ಮಾರಿ್ಡಸಲು ಕೃಷ್ಣ ಬಿ ಸ್ಕೀಂ ಬೃಹತ್ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.
ಮುಂಬರುವ ದಿನಮಾನಗಳಲ್ಲಿ ಕುಷ್ಟಗಿ ತಾಲೂಕಿನಾಂದ್ಯಂತ ಅನೇಕ ಜನಪರ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಕಾರಣ ತಾಲೂಕಿನ ಜನರ ಸಹಕಾರ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಚಳಗೇರಿ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 2022 ಸಾಲಿನ ಪಾಕ್ಯೇಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಆರ್ಶಿವಚನ ನುಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೆಂದ್ರ್ಪ ಬಳೂಟಗಿ, ಮುಂಖಡ ಚಂದಪ್ಪ ತಳವಾರ, ರಾಯಚೂರು ಆರಿ್ಡ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಶಿವ ಶಂಕರಗೌಡ ಪಾಟೀಲ್ ಮುಖ್ಯ ಅಥಿತಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಂಘದ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಚೀಣಿ, ಪ್ರಭು ಶಂಕರಗೌಡ ಪಾಟೀಲ್, ಯಲ್ಲಪ್ಪ ಗದ್ದಿ, ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ದೇವೆಂದ್ರ್ಪ ತಳ್ಳಿಹಾಳ, ರಾಮಣ್ಣ ಗುಜ್ಜಲ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ನಾಗರಾಳ ಸೇರಿದಂತೆ ತಾಲೂಕಿನ ನೂರಾರು ಪ್ರಭಾಕರ ಚೀಣಿ ಅಭಿಮಾನಿ ಬಳಗದವರು ಹಾಗೂ ಮತ್ತಿತರೆ ಮುಖಂಡರು ಉಪಸ್ಥಿತರಿದ್ದರು.
ಪುರಸಭೆ ಸದಸ್ಯ ವಸಂತ ಮೇಲಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಕೀಲ ಹೋಳಿಯಪ್ಪ ಕುರಿ ಸ್ವಾಗತಿಸಿದರು. ಪ್ರವೀಣ ತಳ್ಳಿ ನಿರೂಪಿಸಿ, ವಂದಿಸಿದರು.