ಇತರೆ ಖಾಯಿಲೆಗಳಿಂದ ಬಳಲುತ್ತಿರವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ
ಬೈಲಹೊಂಗಲ 17 : ಕೋರೋನಾ ವೈರಸ್ ಎರಡನೇ ಅಲೆ ರಾಜ್ಯದಲ್ಲೂ ಹೆಚ್ಚುತ್ತಿದೆ ಈ ಹಿನ್ನಲೆಯಲ್ಲಿ 60 ವರ್ಷ ಮೇಲ್ಪಟ್ಟವರು, 40 ರಿಂದ 60 ವರ್ಷದೊಳಗಿದ್ದು ಬಿಪಿ, ಮಧುಮೇಹ ಮತ್ತು ಇತರೆ ಖಾಯಿಲೆಗಳಿಂದ ಬಳಲುತ್ತಿರುವ ನಾಗರೀಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಾಲೂಕಿನ ದೊಡವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್ವರಿ ಹಿರೇಮಠ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಅವರು ಬುಧವಾರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮದ ಹಿರಿಯ ನಾಗರೀಕರಿಗೆ ವಿವಿಧ ಖಾಯಿಲೆಗಳಿರುವವರಿಗೆ ಕೋವಿಡ್ ಲಸಿಕೆ ನೀಡಿ ಮಾತನಾಡಿದರು. ಜನ ಯಾವುದೇ ಆತಂಕ ಭಯ ಪಟ್ಟುಕೊಳ್ಳದೆ ಲಸಿಕೆ ಹಾಕಿಸಿಕೊಳ್ಳಬೇಕು. ಮೊದಲ ಲಸಿಕೆ ಹಾಕಿದ 28 ದಿನಗಳ ನಂತರ ಎರಡನೇ ಲಸಿಕೆ ಹಾಕಲಾಗವದು. ಲಸಿಕೆ ಹಾಕಿಸಿಕೊಳ್ಳಲು ಬರುವವರು ಆಧಾರ ಕಾರ್ಡ ತರಬೇಕು ಎಂದು ಅವರು ಹೇಳಿದರು.
ಈ ವೇಳೆ ಆಯುಷ್ ವೈದ್ಯ ಸುಭಾಸ್ ಬಹುರೂಪಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.