ಜನವರಿ ವೇಳೆಗೆ ತುರ್ತು ಬಳಕೆಗೆ ಕೊರೋನ ಲಸಿಕೆ ಲಭ್ಯ: ರಣದೀಪ್ ಗುಲೇರಿಯಾ
ನವದೆಹಲಿ, ಡಿಸೆಂಬರ್ 5: ಮೂರನೇ ಹಂತದ ಪ್ರಯೋಗದಲ್ಲಿರುವ ಎರಡು ಕೊರೊನಾ ಸೋಂಕು ನಿವಾರಕ ಲಸಿಕೆ ಹೊಸ
ವರ್ಷದ 2021ರ ಜನವರಿ ವೇಳೆಗೆ ದೇಶದಲ್ಲಿ ತುರ್ತು
ಬಳಕೆಗೆ ಲಭ್ಯವಾಗಬಹುದು ಎಂಬ ವಿಶ್ವಾಸವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಗಳ (ಏಮ್ಸ್) ನಿರ್ದೇಶಕ
ರಣದೀಪ್ ಗುಲೇರಿಯಾ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ
ಇಂಗ್ಲೆಂಡ್ ಫೈಜರ್ ಇಂಕ್ ನ ಕೊರೊನಾವೈರಸ್ ಲಸಿಕೆಯನ್ನು
ಅನುಮೋದಿಸಿದೆ. ತುರ್ತು ಬಳಕೆಗಾಗಿ ಫೈಜರ್ ನಿಂದ ಕೊರೊನಾವೈರಸ್ ಲಸಿಕೆಗೆ ಯುಕೆ ತನ್ನ ಅನುಮೋದನೆ ಯನ್ನು
ನೀಡಿ ತದನಂತರ , ಮೂರನೇ ಹಂತದ ಪ್ರಯೋಗಗಳು ಮುಗಿದ ಮೇಲೆ
ಭಾರತದ ಸ್ವಯಂ ಲಸಿಕೆಗಳು ಸಾರ್ವಜನಿಕರಿಗೆ
ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಈ
ಹಿಂದೆ ರಂದೀಪ್ ಗುಲೇರಿಯಾ ಅವರು ಕೊರೊನಾ ನಿವಾರಕಾ
ಲಸಿಕೆಯು 2022ರ ವರೆಗೂ ಸಾಮಾನ್ಯ ಜನರಿಗೆ ಲಭ್ಯವಾಗುವುದಿಲ್ಲ , ಭಾರತೀಯ ಮಾರುಕಟ್ಟೆಗಳಲ್ಲಿ ಕೊರೊನಾವೈರಸ್ ಲಸಿಕೆ ಯು ಸುಲಭವಾಗಿ
ಲಭ್ಯವಾಗಬೇಕಾದರೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಏಮ್ಸ್ ನಿರ್ದೇಶಕರು
ಈ ಮೊದಲು ಹೇಳಿದ್ದರು ಆದರೆ ಈಗ ಅದು ಬದಲಾಗಿದ್ದು ಬೇಗನೆ
ಅದು ತುರ್ತು ಬಳಕೆಗೆ ಲಸಿಕೆ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.