ರಾಷ್ಟ್ರೀಯ

ಆಂಬ್ಯುಲೆನ್ಸ್ ಚಾಲಕನಿಂದ ಕೋವಿಡ್ ಸೋಂಕಿತೆಯ ಅತ್ಯಾಚಾರ

ಆಂಬ್ಯುಲೆನ್ಸ್ ಚಾಲಕನಿಂದ ಕೋವಿಡ್ ಸೋಂಕಿತೆಯ ಅತ್ಯಾಚಾರ

ತಿರುವನಂತಪುರಂ, ಸೆಪ್ಟೆಂಬರ್ 6: ಕೋವಿಡ್ ಸೋಂಕಿತ ಮಹಿಳೆಯ ಮೇಲೆ ಆಂಬ್ಯುಲೆನ್ಸ್ ಒಳಗೆಯೇ ಅದರ ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೇರಳದ ಪಠಾನ್ಮಿತ್ತ ಜಿಲ್ಲೆಯ ಅರನ್ಮುಲದಲ್ಲಿ ನಡೆದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಈ ಘಟನೆಯಿಂದ ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಪ್ರಕರಣದ ಆರೋಪಿ ನಫೇಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.


ಸುದ್ದಿ ಓದಿ