ಮದರಸಾದಲ್ಲಿ ಕೋವಿಡ್ ಕೇರ್ ಸೆಂಟರ್ ವೀಕ್ಷಣೆ
ಚಿಕ್ಕೋಡಿ: ಜೊಲ್ಲೆ ಚಾರಿಟಿ ಫೌಂಡೇಶನ್ ವತಿಯಿಂದ, ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ತಯಾರಿ ನಡೆಸಿರುವ ಹಿನ್ನಲೆಯಲ್ಲಿ, ನಿಪ್ಪಾಣಿ ತಾಲೂಕಿನ ಬೋರಗಾಂವ, ಗಳತಗಾ,ಹಾಗೂ ಸೌಂದಲಗಾ ಗ್ರಾಮಕ್ಕೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯ ಬಸವಪ್ರಸಾದ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು.ಜೊಲ್ಲೆ ಚಾರಿಟಿ ಫೌಂಡೇಶನ್ ವತಿಯಿಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ನೂತನ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲಿಸಿ, ಆಯಾ ಗ್ರಾಮಗಳ ಮುಖಂಡರು ಮತ್ತು ವೈದ್ಯರೊಂದಿಗೆ ಸಭೆ ನಡೆಸಿದರು.
ಬಳಿಕ ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ನಲ್ಲಿ ಅಗತ್ಯವಿರುವ ವೈದ್ಯರು, ನಸರ್್ ಹಾಗೂ ಡಿ ಗ್ರುಪ್ ಸಿಬ್ಬಂದಿಗಳನ್ನು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದಲೇ ನೇಮಿಸಿ, ಸೋಂಕಿತರ ಚಿಕಿತ್ಸೆಗೆ ಸಕಲ ಸೌಲಭ್ಯಗಳನ್ನು ಒದಗಿಸಲು ತಿಮರ್ಾನಿಸಿದರು. ಜನತೆಯ ಆರೋಗ್ಯ ರಕ್ಷಣೆಯ ಸತ್ಕಾರ್ಯದ್ದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಸಕ್ರಿಯವಾಗಿದ್ದು, ಸಕಲ ಸಹಕಾರ ನೀಡಲು ಸನ್ನದ್ಧವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಾದಾ ಬಾದುಲೆ, ಬಾಬಾಸಾಬ ಚೌಗಳೆ, ಗುಲಾಬ ಅಪರಾಜ, ಶಿವಾಜಿ ಭೋರೆ, ಸತೀಶ ಪಾಟೀಲ, ರಣಜಿತ ಪಾಟೀಲ, ಅಧಿಕಾರಿಗಳು, ವೈದ್ಯರು, ಗಣ್ಯರು, ಉಪಸ್ಥಿತರಿದ್ದರು