ಕೋವಿಡ್-19 ಸಹಾಯ ಹಸ್ತ ಅಭಿಯಾನ ಕಾರ್ಯಕ್ರಮ
ಹೊಸಪೇಟೆ 20: ಕೋವಿಡ್-19 ಸಹಾಯ ಹಸ್ತ ಅಭಿಯಾನವು ವಿಜಯನಗರ ಕ್ಷೇತ್ರದಲ್ಲಿ ಯಶಸ್ವಿಗೊಳಿಸಲು ಕೆ.ಪಿ.ಸಿ.ಸಿ.ಯ ಕೋವಿಡ್ -19 ಸಹಾಯ ಅಭಿಯಾನದ ಬಳ್ಳಾರಿ ಜಿಲ್ಲೆಯ ವೀಕ್ಷಕರು ಹಾಗೂ ಮಾಜಿ ಸಚಿವ ಸಂತೋಷ .ಎಸ್.ಲಾಡ್ ರವರು ದಿ. 20ರಂದು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು.
ಈ ಸಭೆಯಲ್ಲಿ ಸಂತೋಷ ಲಾಡ್ರವರು ಮಾತನಾಡಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಮಾಮ್ ನಿಯಾಜಿ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಕೋವಿಡ್ನಿಂದ ಮೃತಪಟ್ಟ ಹಾಗೂ ಸೋಂಕಿಗೆ ಒಳಗಾದ ಕುಟುಂಬದವರ ಸದಸ್ಯರನ್ನು ಭೇಟಿ ಅವರ ಸಮಸ್ಯೆಗಳನ್ನು ಸೋಂಕಿತರ ಮಾಹಿತಿಯನ್ನು ಪಡೆಯಬೇಕು ಈ ಮೂಲಕ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯ ವಾಗುತ್ತದೆ, ಕಾಂಗ್ರೆಸ್ ವಾರಿಯರ್ಗಳು ಮನೆಗಳಿಗೆ ಮಾಹಿತ ಸಂಗ್ರಹಿಸಲು ಬಂದಾಗ ಸಾರ್ವಜನಿಕರು ನಿಖರ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರಿದರು.
ಈ ವೇಳೆ ಬ್ಲಾಕ್ ಅಧ್ಯಕ್ಷ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ ಪಕ್ಷದ ಎಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಸಹಾಯ ಹಸ್ತ ಅಭಿಯಾನವನ್ನು ಯಶಸ್ವಿಗೊಳಿಸುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷೀ ನಾರಾಯಣ, ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆ.ಪಿ.ಸಿ.ಸಿ ಪದಾಧಿಕಾರಿಗಳಾದ ಗುಜ್ಜಲ್ರಘ, ಬಿಎಂ.ಪಾಟೀಲ್, ಕೆ.ಶಿವಮೂರ್ತಿ, ಹಾಗೂ ಕಮಲಾಪುರ ಬ್ಲಾಕ್ ಅಧ್ಯಕ್ಷ ವಿ.ಸೋಮಪ್ಪ, ಮುಖಂಡರಾದ ವೆಂಕೋಬಣ್ಣ, ಚಿದಾನಂದ, ರಾಮನಗೌಡ, ತೇಜನಾಯ್ಕ, ಬಸವರಾಜ ಮೇಟಿ, ಕೆ. ಗೌಸ್. ಎಸ್.ಬಿ.ಮಂಜುನಾಥ, ಜಿ.ರಘು, ಸತ್ಯನಾರಾಯಣ, ವಿಜಯ ಕುಮಾರ್, ಮುನ್ನಿ ಖಾಸಿಂ. ಇಂದುಮತಿ, ರಜೀಯಾ, ಭರತ್ ಕುಮಾರ್, ನವಾಜ್, ಬುಡೇನ್, ಗೀತಾ ತಿಮ್ಮಪ್ಪ, ನನ್ಮೇಬೀ, ಗಂಗಮ್ಮ, ಗೀತಾ, ಅಣಾಮಲೈ, ತಿಮ್ಮಪ್ಪ ಯಾದವ್, ಇತರರು ಭಾಗವಹಿಸಿದ್ದರು.