‘ಕೊವೀಡ್ -19 ಸಹಾಯ ಹಸ್ತ’ ಅಭಿಯಾನ
ಹೊಸಪೇಟೆ 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಇಡೀ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ಅಭಿಯಾನ ಹಮ್ಮಿಕೊಂಡಿರುವ ಪ್ರಯುಕ್ತ ವಿಜಯನಗರ ಕ್ಷೇತ್ರದಲ್ಲಿ ಕೊವೀಡ್ನಿಂದ ಮೃತಪಟ್ಟ ಕುಟುಂಬಗಳಿಗೆ ನೆರವು ನೀಡಲು ಹಾಗೂ ಕೊವೀಡ್ ಸೋಂಕಿಗೆ ಒಳಗಾಗಿ ಸಂಕಷ್ಟಕ್ಕೊಳಗಾದ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವ ‘ಕೊವೀಡ್ -19 ಸಹಾಯ ಹಸ್ತ’ ಅಭಿಯಾನವನ್ನು ಕ್ಷೇತ್ರದಲ್ಲಿ ಅನುಷ್ಟಾನಗೊಳಿಸಲು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ರವರ ನೇತೃತ್ವದಲ್ಲಿ ಬ್ಲಾಕ್ನ ವಿವಿಧ ಪದಾಧಿಕಾರಿಗಳ ಪೂರ್ವ ಸಿದ್ದಾತಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ಬ್ಲಾಕ್ ಆಧ್ಯಕ್ಷ ಹೆಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ರವರು ಮಾತನಾಡಿ ಕೊವೀಡ್ ನಿಂದ ಹೊಸಪೇಟೆ ತಾಲೂಕಿನಲ್ಲಿ ಅನೇಕ ಕುಟುಂಬಗಳಲ್ಲಿ ಮೃತಪಟ್ಟಿದ್ದು ಬಿಜೆಪಿ ಸರ್ಕಾರವು ಸರಿಯಾದ ಮಾಹಿತಿ ನೀಡದೇ ಜನರಿಗೆ ದ್ರೋಹವೆಸಗಿದೆ, ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆಗೆ ಸ್ಪದಿಂಸದೇ ಸಾವಿಗೆ ಕಾರಣವಾಗಿದೆ ಹಾಗೂ ಕೊವೀಡ್ನಿಂದ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸದೇ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು. ಹಾಗೂ ಇಂತಹ ಸಂಕಷ್ಟದ ದಿನಗಳಲ್ಲಿ ಸಹ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕೊರೊನಾಕ್ಕಿಂತ ಕ್ರೋರವಾಗಿ ವರ್ತಿಸುತ್ತಿವೆ ಎಂದು ಖಂಡಿಸಿದರು.
ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಕಾಂಗ್ರೆಸ್ ಪಕ್ಷವು ವಿಜಯ ನಗರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಹಾಗೂ ಕೋವೀಡ್ಗೆ ಒಳಗಾದವರ ಮನೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಬೇಟಿ ಮಾಡಿ ಅವರಿಗೆ ಸಾಂತ್ವನ ಹೇಳುವ ಮೂಲಕ ಪಕ್ಷದಿಂದ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಿ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಹಾಗೂ ಪಕ್ಷದಿಂದಲೂ ನೆರವನ್ನು ನೀಡಲಾಗುವುದು ಎಂದರು.
ಹಾಗಾಗಿ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಹಾಗೂ ಕೋವಿಟ್ ಒಳಗಾದ ಮನೆಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಮಾಹಿತಿ ಪಡೆಯಲು ಅಗಮಿಸಿದಾಗ ಸಾರ್ವಜನಿಕರು ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ಕೋರಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ ಇಮಾಮ್ ನಿಯಾಜಿ, ಕಮಲಾಪುರ ಬ್ಲಾಕ್ ಅಧ್ಯಕ್ಷರಾದ ವಿ.ಸೋಮಪ್ಪ, ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ನಾಗರಾಜ, ನಿಂಬಗಲ್ ರಾಮಕೃಷ್ಣ, ಚಿದಾನಂದಪ್ಪ, ವೆಂಕಟರಮಣ, ಪಕ್ಷದ ವಿವಿಧ ಪದಾಧಿಕಾರಿಗಳಾದ ಎಸ್.ಬಿ. ಮಂಜುನಾಥ, ಜಿ.ರಘು, ತೇಜಾ ನಾಯ್ಕ್, ಭರತ ಕುಮಾರ್, ವಿಜಯಕುಮಾರ್,ನವಾಜ್ ಗಣೇಶ, ತಾಜುದೀನ್, ಅಣ್ಣಾಮಲೈ, ಯಂಕಪ್ಪ, ಕೆ.ಗೌಸ್, ಬೆಲ್ಲದ್ ರೌಫ್, ವಿನಯಶೆಟ್ಟರ್, ತಿಮ್ಮಪ್ಪ ಯಾದವ್, ಮುನ್ನಿಖಾಸಿಂ, ಮಾಬುನ್ನಿ, ನನ್ನೆಭಿ, ರಮೇಶ್, ಇತರರು ಭಾಗವಹಿಸಿದ್ದರು.