ಜಿಲ್ಲೆಯಲ್ಲಿ 74 ಜನರಿಗೆ ಸೋಂಕು: ಇಬ್ಬರ ಸಾವು
ರಾಣೀಬೆನ್ನೂರ 25: ರಾಣೀಬೆನ್ನೂರ ತಾ.ನಲ್ಲಿ ಇಂದು 18 ಜನರಿಗೆ ಸೋಂಕು ತಗುಲಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ. ಸಾವು ಕಂಡವರು ಹಾವೇರಿಯ ನಾಗೇಂದ್ರನಮಟ್ಟಿಯ ಮಹಿಳೆ ಹಾಗೂ ಹಿರೆಕೆರೂರ ತಾ.ನ ಹಂಸಭಾವಿ ಗ್ರಾಮದ ಓರ್ವ ಪುರುಷ ಇವರಿಬ್ಬರು ಉಸಿರಾಟದ ತೊಂದರೆಗೆ ಸಿಲುಕಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಇಂದು ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಒಟ್ಟು 74 ಜನರಿಗೆ ಸೋಂಕು ತಗುಲಿದ್ದು ಹಾವೇರಿ-18,ರಾಣೀಬೆನ್ನೂರ- 18, ಹಿರೇಕೆ ರೂರ-15, ಬ್ಯಾಡಗಿ-10, ಹಾನಗಲ್-7, ಇತರೆ-5, ಶಿಗ್ಗಾಂವ-1 ಹೀಗೆ ಒಟ್ಟು 74 ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.