ರಾಷ್ಟ್ರೀಯ

ಕೋವಿಡ್ 19 : ಸೋಂಕು ಪ್ರಕರಣಗಳ ಸಂಖ್ಯೆ 69, 79, 424ಕ್ಕೇರಿಕೆ, ಚೇತರಿಕೆ ದರ ಶೇ. 85.81

ಕೋವಿಡ್ 19 : ಸೋಂಕು ಪ್ರಕರಣಗಳ ಸಂಖ್ಯೆ 69, 79, 424ಕ್ಕೇರಿಕೆ, ಚೇತರಿಕೆ ದರ ಶೇ. 85.81

 ನವದೆಹಲಿ, ಅ 10: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಭಾರತವು 73,272 ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿನ ಒಟ್ಟು ಸಂಖ್ಯೆ 69,79,424 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ತಿಳಿಸಿದೆ.ದೇಶವು ಕಳೆದ ಒಂದೇ ದಿನ 82,753 ಗುಣಪಡಿಸಿದ ಪ್ರಕರಣಗಳನ್ನು ದಾಖಲಿಸಿದ್ದು, ಇದುವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 59,88,822 ಕ್ಕೆ ಏರಿಕೆಯಾಗಿದೆ.

ಏತನ್ಮಧ್ಯೆ, ಕಳೆದೊಂದು ದಿನ ಕೋವಿಡ್ ಸೋಂಕಿನಿಂದ 926 ಸಾವುಗಳು ಸಂಭವಿಸಿದ್ದು, ಸಾವಿನ ಒಟ್ಟು ಸಂಖ್ಯೆ 1,07,416 ಕ್ಕೆ ತಲುಪಿದೆ. ಶೇಕಡಾವಾರು ಪ್ರಕಾರ, ಸಕ್ರಿಯ ಪ್ರಕರಣಗಳು ಶೇಕಡಾ 12.65, ಚೇತರಿಕೆ ಶೇಕಡಾ 85.81, ಮತ್ತು ಸಾವುಗಳು ಶೇಕಡಾ 1.54ರಷ್ಟಿವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 11,64,018 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಇಲ್ಲಿಯವರೆಗೆ ಸೋಂಕು ಪತ್ರೆಗಾಗಿ 8,57,98,698 ಪರೀಕ್ಷೆ ನಡೆಸಲಾಗಿದೆ.  ಏತನ್ಮಧ್ಯೆ, ಮಹಾರಾಷ್ಟ್ರವು ಗರಿಷ್ಠ ಸೋಂಕು ಹಾಗೂ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ.  ಜಾಗತಿಕವಾಗಿ, ಅಮೆರಿಕ ಹೆಚ್ಚು ಸೋಂಕಿಗೆ ಒಳಗಾಗಿದ್ದು, ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳಿವೆ.

 

ಸುದ್ದಿ ಓದಿ