ರಾಣೆಬೆನ್ನೂರ

ಕೋವಿಡ್ ಹಿನ್ನಲೆ: ದಕ್ಷಿಣ ಭಾರತದ ತುಂಗಾರತಿ ಮುಂದೂಡಿಕೆ

ಕೋವಿಡ್ ಹಿನ್ನಲೆ: ದಕ್ಷಿಣ ಭಾರತದ ತುಂಗಾರತಿ ಮುಂದೂಡಿಕೆ

ರಾಣೀಬೆನ್ನೂರ 20: ಹರಿಹರ ಸಮೀಪದ ಕುಮಾರಪಟ್ಟಣಂ ಪುಣ್ಯಕೋಟಿಮಠದ ತುಂಗಾರತಿ ಸಮಾರಂಭ ಮಾರ್ಚ್‌ ತಿಂಗಳಿಗೆ ಇಂದು ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದು ಮುಂದೂಡಲಾಯಿತು.  

ರಾಣೇಬೆನ್ನೂರು ಕ್ಷೇತ್ರದ ಶಾಸಕರಾದ ಅರುಣಕುಮಾರ ಪೂಜಾರ ಹಾಗೂ ಪುಣ್ಯಕೋಟಿ ಮಠದ ಶ್ರೀಗಳು ಇಂದು  ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಕರೋನಾ ಎಂಬ ಮಹಾಮಾರಿ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚು ಹಬ್ಬುತ್ತಿರುವ ಕಾರಣ ಸರ್ಕಾರದ ಆದೇಶ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಮುಂದೂಡಲು ಜಗದ್ಗುರುಗಳ ಅಪ್ಪಣೆಯ ಆಶೀರ್ವಾದ ಪಡೆಯಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು ಉತ್ತರ ಭಾರತದ ಗಂಗಾನದಿ  ತೀರದಲ್ಲಿ ಜರಗುವಂತಹ ಗಂಗಾರತಿ ಮಾದರಿಯಲ್ಲಿ  ದಕ್ಷಿಣ ಭಾರತದ ಇತಿಹಾಸದಲ್ಲಿ  ಪ್ರ-ಪ್ರಥಮಬಾರಿಗೆ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಪಾದಾರೆ​‍್ಣ ಮಾಡುತ್ತಿರುವ ಈ ಸಂದರ್ಭದಲ್ಲಿ  ಜಗದ್ಗುರುಗಳನ್ನು ಆಹ್ವ್ವಾನಿಸಲು  ಅರ್ಥಪೂರ್ಣವಾಗಿ  ಸಮಾರಂಭದ ಸಿದ್ದತೆ ನಡೆದಿತ್ತು, ಸದ್ಭಕ್ತರ ಮತ್ತು ರಾಣೇಬೆನ್ನೂರು ತಾಲ್ಲೂಕಿನ  ಎಲ್ಲಾ ಜನಪ್ರತಿನಿಧಿಗಳ ಸಹಕಾರವು ಸಹ  ದೊರೆತ್ತಿತ್ತು. ಆದರೆ ಕರೋನಾ ಎಂಬ ಈ ಮಹಾಮಾರಿ ಕಾಯಿಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಆಗಮಿಸುವ ಬಕ್ತರಿಗೆ ಕರೋನಾ ಭೀತಿ ಆವರಿಸಬಾರದೆಂಬ ಮುಂಜಾಗೃತೆಯಿಂದ ಕಾರ್ಯಕ್ರಮ ಮುಂದೂಡಿರುವುದು ಒಳ್ಳೆಯ ಬೆಳವಣಿಗೆ ಕಿರಿಯ ವಯಸ್ಸಿನಲ್ಲಿ ವೈಜ್ಞಾನಿಕ ಲೋಕಕ್ಕೆ ಸವಾಲೆಸುವಂತಹ ಕಠೊರ ತಪಸ್ಸನ್ನು ಮಾಡಿರುವಂತಹ ಜಗದೀಶ್ವರ ಸ್ವಾಮಿಗಳು ಪುಣ್ಯಕೋಟಿ ಸ್ವಾಮೀಜಿ ಎಂಬುದಾಗಿ ಪ್ರಸಿದ್ದಿಯನ್ನು  ಪಡೆದು ಈಗ ಐತಿಹಾಸಿಕ ತುಂಗಾರತಿ ಸಮಾರಂಭ ಮಾಡುವುದರ ಮೂಲಕ  ತಂಗಾರತಿ ಸ್ವಾಮೀಜಿಯಾಗಿ ಮತ್ತೊಂದು ಐತಿಹಾಸಿಕ ಕಾರ್ಯಕ್ಕೆ  ಕೈ ಹಾಕಿರುವುದು ನಮಗೆ ಅತೀವ ಸಂತಸನ್ನುಂಟು ಮಾಡಿದೆ  ಸದಾವಕಾಲ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸರ್ವ ಧರ್ಮದ ಸದ್ಭಕ್ತರೊಂದಿಗೆ ಸಮನ್ವಯತೆಯನ್ನು  ಸಾಧಿಸಿಕೊಂಡು ಒಳ್ಳೆಯ ಯುವತಿಯಾಗಿ ಕೆಲಸ ಮಾಡುತ್ತಿರುವುದು ನಮಗೆ ಅತೀವ ಸಂತಸವನ್ನುಂಟು ಮಾಡಿದೆ ಆ  ಭಾಗದಲ್ಲಿ  ಇನ್ನಷ್ಟು ಮತ್ತಷ್ಟು ಶ್ರೀಗಳಿಂದ ಸಭೆ ಸಮಾರಂಭಗಳು ಜರುಗಲಿ ಪುಣ್ಯಕೋಟಿ ಮಠದ ಕೀರ್ತಿ ನಾಡಿನ ತುಂಬೆಲ್ಲ  ಕಂಗೊಳಿಸುವಂತಾಗಲಿ ಎಂದು  ಅಭಯದ ಆಶಿರ್ವಾದವನ್ನು  ಮಾಡಿ  ಶಾಸಕ ಅರುಣಕುಮಾರ ಪೂಜಾರರವರ ಅಭಿವೃದ್ಧಿ ಕಾರ್ಯಗಳನ್ನು  ಜನಪ್ರೀಯತೆಯನ್ನು ಕಂಡು ಸಂತಸವನ್ನು ವ್ಯಕ್ತಿಪಡಿಸಿ ಮುಂದಿನ ದಿನಗಳಲ್ಲಿ ಇನ್ನು ಉನ್ನತವಾದ ಸ್ಥಾನಮಾನಗಳು ದೊರೆತು ಸೇವೆ ಮಾಡುವಂತ ಸುಯೋಗ ಒದಗಿ ಬರುವಂತಾಗಲಿ  ಎಂದು ಶುಭಹಾರೈಸಿದರು.  

ಶಾಸಕರಾದ ಅರುಣಕುಮಾರ ಮಾತನಾಡಿ ನಾನು ಜನಿಸಿರುವ ಗ್ರಾಮದಲ್ಲಿ  ನಮ್ಮ ಸ್ವಾಮಿಜಿಯವರು ಅನುಷ್ಟಾನವನ್ನು ಮಾಡಿ  ಚಿಕ್ಕ ವಯಸ್ಸಿನಲ್ಲಿ ಶ್ರೀಮಠವನ್ನು  ಸ್ಥಾಪಿಸಿ ನಮ್ಮ ತಾಲ್ಲೂಕಿನ ಶ್ರೇಷ್ಠ ಗುರುಗಳಾಗಿ ನಡೆದಾಡುವ, ಮಾತನಾಡವ ದೇವರೆಂದೇ ಪ್ರಸಿದ್ದಿ ಪಡೆಯುವುದರ ಜೊತೆಗೆ ದೇವರಿಗೆ ಸರಿಸಮಾನವಾದ ಸಕಲ  ಜೀವಸಂಕುಲಕ್ಕೆ ಬೇಕಾಗುವ ವಸ್ತು ಎಂದರೆ ನೀರು ಅಂತಹ  ನೀರಿನ ಪೂಜೆಯನ್ನು ನಮ್ಮೂರಿನ  ತುಂಗಭದ್ರ ನದಿ ತೀರದಲ್ಲಿ  ತುಂಗಾರತಿಯನ್ನಾಗಿ ಮಾಡಿ ಎಲ್ಲಾ ಸಮುದಾಯಗಳ ಪ್ರೀತಿ ಮಮತೆಯ ಸ್ವಾಮೀಜಿಯಾಗಿ ನಮ್ಮ ಗ್ರಾಮದ ಹೆಸರನ್ನು  ರಾಜ್ಯಮಟ್ಟದಲ್ಲಿ  ಅಷ್ಟೆ ಅಲ್ಲದೇ ರಾಷ್ಟ್ರದಲ್ಲಿಯೂ ಸಹ ಪ್ರಸಿದ್ದಿ ಪಡೆದಿರುವುದು ನನಗೂ ಮತ್ತು ನಮ್ಮೂರಿನ ಹಿರಿಯರಿಗೆ  ಸಂತಸವನ್ನುಂಟು ಮಾಡಿದೆ ಮಠದ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂಗಳನ್ನು  ಬಿಡುಗಡೆ ಮಾಡಿಸಿದ್ದೇನೆ ಮುಂದಿನದಿನಗಳಲ್ಲಿ ಇನ್ನು ಹಚ್ಚಿನ ಅನುದಾನವನ್ನು  ತಂದು  ಅನ್ನದಾಸೋಹದ ಪವಿತ್ರ ಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸುತ್ತೇನೆಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಸಾದ ಸಿರಿಮಣಿ ಕರಬಸಪ್ಪ ಮಠದ ಕಾರ್ಯದರ್ಶಿ ರವೀಂದ್ರಗೌಡ ಎಫ್‌. ಪಾಟೀಲ ಮುಂತಾದವರಿದ್ದರು. 


ಸುದ್ದಿ ಓದಿ