ಕೋವಿಡ್; ತಪ್ಪು ಸಂದೇಶ, ಅವಹೇಳನಕಾರಿ ಪೋಸ್ಟ್ ವಿರುದ್ಧ ಮಹಾರಾಷ್ಟ್ರ ಪೊಲೀಸರಿಂದ ಕಠಿಣ ಕ್ರಮ
ಮುಂಬೈ, ಜೂ 22,ರಾಜ್ಯದಾದ್ಯಂತ ಕರೋನವೈರಸ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ಅವಧಿಯಲ್ಲಿ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದ ಅಪರಾಧಿಗಳು ಮತ್ತು ತೊಂದರೆ ನೀಡುತ್ತಿರುವವರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಸೈಬರ್ ಅಪರಾಧ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಒಟ್ಟು 494 ಸೈಬರ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, 261 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಸೈಬರ್ ವಿಭಾಗ ಮಾಹಿತಿ ನೀಡಿದೆ. 2020 ರ ಜೂನ್ 21 ರವರೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 494 ಅಪರಾಧಗಳು ( 33 ಎನ್ಸಿ) ದಾಖಲಾಗಿವೆ ಮತ್ತು 261 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇವುಗಲಪೈಕಿ ಆಕ್ರಮಣಕಾರಿ ವಾಟ್ಸಾಪ್ ಸಂದೇಶಗಳನ್ನು ರವಾನಿಸಿದ 195 ಪ್ರಕರಣಗಳು, ಆಕ್ರಮಣಕಾರಿ ಫೇಸ್ಬುಕ್ ಪೋಸ್ಟ್ಗಳನ್ನು ಹಂಚಿಕೊಂಡ 203 ಪ್ರಕರಣಗಳು, ಟಿಕ್ಟಾಕ್ ವಿಡಿಯೋ ಹಂಚಿಕೆ ಪ್ರಕರಣ ಮತ್ತು ಟ್ವಿಟರ್ನಲ್ಲಿ 26 ಪ್ರಕರಣಗಳು ದಾಖಲಾಗಿರುವುದೆ ಎಂದು ಮಹಾರಾಷ್ಟ್ರ ಸೈಬರ್ ವಿಭಾಗ ತಿಳಿಸಿದೆ.ಇನ್ಸ್ಟಾಗ್ರಾಮ್ನಲ್ಲಿ 9 ಅವಹೇಳನಕಾರಿನ ಟ್ವೀಟ್ ಪ್ರಕರಣಗಳು, 4 ಪೋಸ್ಟ್ಗಳನ್ನು ಮಾಡಿದ ಪ್ರಕರಣಗಳು ದಾಖಲಾಗಿವೆ, ಆದರೆ ಇತರ ಸಾಮಾಜಿಕ ಮಾಧ್ಯಮಗಳನ್ನು (ಆಡಿಯೊ ಕ್ಲಿಪ್ಗಳು, ಯೂಟ್ಯೂಬ್) ದುರುಪಯೋಗಪಡಿಸಿಕೊಂಡ 57 ಪ್ರಕರಣಗಳು ದಾಖಲಾಗಿವೆ ಮತ್ತು ಈವರೆಗೆ 261 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.