ರಾಣೆಬೆನ್ನೂರ

ಅಪ್ಪರ್ ತುಂಗಾ ಇಲಾಖೆಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ

ಅಪ್ಪರ್ ತುಂಗಾ ಇಲಾಖೆಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ

ರಾಣೇಬೆನ್ನೂರ 15: ಸ್ಥಳೀಯ ಅಪ್ಪರ್ ತುಂಗಾ ಇಲಾಖೆಯ ವರು ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗಾಗಿ 11 ಗುಂಟೆ ಜಾಗೆ ವಶಪಡಿಸಿಕೊಂಡು ಕಾಮಗಾರಿ ನಿರ್ಮಿಸಿದ್ದರು. ಜಮೀನು ಕಳೆದು ಕೊಂಡ ರೈತನಿಗೆ ಪರಿಹಾರ ಧನ ವಿತರಿಸದೆ ಇದ್ದುದರಿಂದ ನ್ಯಾಯಾಲಯವು ರೈತನಿಗಾದ ಅನ್ಯಾಯವನ್ನು ಸರಿಪಡಿಸಲು ಅಪ್ಪರ್ ತುಂಗಾ ಯೋಜನೆಯ ಭೂ ಸ್ವಾಧೀನ ಕಚೇರಿ ಜಪ್ತಿ ಮಾಡಿ ಅಭಿಯಂತರರ ವಾಹನ, ಕಂಪ್ಯೂಟರ್ ಹಾಗೂ ಗಾರ್ಡೇಜ್‍ಗಳನ್ನು ವಶಕ್ಕೆ ಪಡಿಸಿ ಕೊಂಡ ಘಟನೆ ವರದಿಯಾಗಿದೆ. 

ರಾಣೀಬೆನ್ನೂರು ತಾಲೂಕಿನ ಮುಷ್ಟೂರು ಗ್ರಾಮದ ಬಸಮ್ಮ ಗಣೇಶಪ್ಪ ಹೊನ್ನತ್ತಿ ಇವರಿಗೆ ಸಂಬಂಧಿಸಿದ 11 ಗುಂಟೆ ಜಾಗೆಯನ್ನು ವಶಪಡಿಸಿಕೊಂಡಿದ್ದರು. ಪ್ರತಿ ಗುಂಟೆಗೆ 50 ಸಾವಿರ ರೂ. ಪರಿಹಾರ ಧನ ನೀಡಲು ಇಲಾಖೆಯು ಒಪ್ಪಿಕೊಂಡಿತ್ತು. ಅದರಂತೆ ಒಟ್ಟು 5,50,000 ಸಾವಿರ ರೂ. ಪರಿಹಾರ ಧನ ವಿತರಿಸಲು ದಿ:29-11-2018 ರಲ್ಲಿ 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶಿಸಿ ತೀರ್ಪು ನೀಡಿದ್ದರು. 2018 ರಿಂದ ಇಲ್ಲಿಯವರೆಗೂ ಅಪ್ಪರ್ ತುಂಗಾ ಯೋಜನೆಯ ಅಧಿ ಕಾರಿಗಳು ಪರಿಹಾರ ಧನ ವಿತರಿಸಲು ವಿಫಲವಾಗಿದ್ದರು. ಈ ಹಿನ್ನೆಲೆಯಲ್ಲಿ ಪುನಃ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಧೀಶರು ಇಲಾಖೆಯ ಆಸ್ತಿಯನ್ನು ಜಪ್ತಿಗೆ ಆದೇಶಿಸಿದ್ದರು. 2018 ರಿಂದ ಇಲ್ಲಿಯವರೆಗೂ ಬಡ್ಡಿ ಹಾಕಿ ದರೆ ಅಂದಾಜು 10 ಲಕ್ಷ ರೂ. ಗಳಾಗುತ್ತವೆ. ಒಟ್ಟು ಅಂದಾಜು 15,50,000ರೂ ವಸೂಲಿ ಮಾಡುವ ದೃಷ್ಠಿಯಿಂದ ನ್ಯಾಯಾಲಯದ ಸಿಬ್ಬಂದಿಯವರು ಕಚೇರಿ ಮೇಲೆ ದಾಳಿ ನಡೆಸಿ ಕಚೇರಿಗೆ ಸಂಬಂಧಿಸಿದ ಮಹೀಂದ್ರಾ ಜೀಪ್ ನಂ.ಕೆಎ-27 ಎಂ-1281, 4 ಕಂಪ್ಯೂ ಟರ್, 6 ಗಾರ್ಡೇಜ್, 12 ಕಬ್ಬಿಣಚೇರ್, 2 ಕುಷನ್ ಚೇರ್, 4 ಪ್ಲಾಸ್ಟಿಕ್‍ಚೇರ್ ಸೇರಿದಂತೆ ಇತರೆ ಒಟ್ಟು 17 ಸಲಕರಣೆಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.       

ರೈತರ ಪರವಾಗಿ ಎಸ್.ಸಿ.ಎರೇಸೀಮಿ ವಕೀಲರು ವಕಾಲತ್ತು ವಹಿಸಿದ್ದರು. ಅನ್ಯಾ ಯಕ್ಕೊಳಗಾದ ರೈತರು ಲೋಕದರ್ಶನದೂಂದಿಗೆ  ಮಾತನಾಡಿ ಯೋಜನೆ ಜಾರಿಗೊಳಿಸಲು ನಮ್ಮಿಂದ ಜಮೀನು ಪಡೆದುಕೊಂಡ ಅಧಿಕಾರಿಗಳು ಪರಿಹಾರ ಧನ ನೀಡದೆ ಸತಾಯಿಸಿದ್ದರು. ಈ ಬಗ್ಗೆ ಕಚೇರಿಗೆ ಅಲೆದು ಅಲೆದು ಸುಸ್ತಾಗಿ ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದೆವು. ನ್ಯಾಯಾಲಯ ಆದೇಶ ನೀಡಿದರೂ ಅಧಿಕಾರಿ ಗಳು ಪರಿಹಾರ ಧನ ನೀಡದೆ ಇರುವುದು ನಮಗೆ ಬೇಸರ ತಂದಿತ್ತು ನ್ಯಾಯವಾದಿಗಳ ಸಮ್ಮುಖದಲ್ಲಿ ಆದೇಶದಂತೆ ಕಛೇರಿ ಜಪ್ತಿಮಾಡಿದ್ದಾರೆ ಪರಿಹಾರ ವಿತರಿಸಲು ಮುಂದಾಗಬೇಕು ಎಂದರು.

ಸುದ್ದಿ ಓದಿ