ರಾಷ್ಟ್ರೀಯ

ವಧುವಿಗೆ ಕೊರೊನಾ ಸೋಂಕು... ಪಿಪಿಇ ಕಿಟ್ ನೊಂದಿಗೆ ಮದುವೆ...!

ವಧುವಿಗೆ ಕೊರೊನಾ ಸೋಂಕು... ಪಿಪಿಇ ಕಿಟ್ ನೊಂದಿಗೆ ಮದುವೆ...!

ಜೈಪುರ (ರಾಜಸ್ಥಾನ), ಡಿಸೆಂಬರ್ 7: ವಧುವಿಗೆ ಕೊರೊನಾ ಪಾಸಿಟಿವ್  ಇರುವುದು  ಪರೀಕ್ಷಾ ವರದಿಯಲ್ಲಿ  ದೃಢಗೊಂಡ ನಂತರ  ನೂತನ ವಧು -ವರನ ಜೊತೆ   ಪುರೋಹಿತರು, ಅತಿಥಿಗಳು ವ್ಯಕ್ತಿಗತ ರಕ್ಷಣಾ ವಸ್ತ್ರ( ಪಿಪಿಇ ಕಿಟ್) ಧರಿಸಿ  ವಿವಾಹದಲ್ಲಿ ಪಾಲ್ಗೊಂಡ ಘಟನೆ  ರಾಜಸ್ಥಾನ  ರಾಜ್ಯದ  ಶಾಬಾದ್ ಜಿಲ್ಲೆಯಲ್ಲಿ  ನಡೆದಿದೆ.

ಶಾಬಾದ್ ಜಿಲ್ಲೆಯ ಯುವತಿಗೆ  ಯುವಕನೊಂದಿಗೆ ಮದುವೆಯ ದಿನ, ಮುಹೂರ್ತ ನಿಗದಿಪಡಿಸಿಕೊಂಡಿದ್ದರು. ಮದುವೆಯ ದಿನದಂದು ವಧುಗೆ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.  ಆದರೆ,  ಕೊರೊನಾ ಸೋಂಕು ತಗುಲಿದ್ದರೂ   ಮೊದಲೇ ನಿಶ್ಚಯಿಸಿದ್ದ  ದಿನ,  ಮುಹೂರ್ತದಲ್ಲಿ  ಮದುವೆ  ಕಾರ್ಯಕ್ರಮ   ನಡೆಸಲು ವಧು-ವರರ ಕುಟುಂಬ  ಸದಸ್ಯರು ನಿರ್ಧರಿಸಿದ್ದರು.

ಇದರಿಂದಾಗಿ ವಧು-ವರರೊಂದಿಗೆ  ಪುರೋಹಿತರು,  ವಿವಾಹಕ್ಕೆ ಹಾಜರಾಗಿದ್ದ  ಅತಿಥಿಗಳಿಗಾಗಿ ಪಿಪಿಇ ಕಿಟ್‌ಗಳನ್ನು  ತರಿಸಲಾಯಿತು. ವಧು-ವರರ ಜೊತೆಗೆ ಎಲ್ಲರೂ ಪಿಪಿಇ ಕಿಟ್‌ಗಳನ್ನು ಧರಿಸಿ ಮದುವೆ ಮುಂದುವರಿಸಿದರು.

ಪಿಪಿಇ ಕಿಟ್ ಧರಿಸಿದ  ಪುರೋಹಿತರು ಮಂತ್ರ ಪಠಿಸುತ್ತಾ  ವಧು ವರನಿಗೆ  ಸೂಚನೆನೀಡಿ ಮದುವೆ ನೆರವೇರಿಸಿದರು.   ವರ ಕೈಗವಸು  ಹಾಗೂ  ಪೇಟದೊಂದಿಗೆ ಪಿಪಿಇ ಕಿಟ್ ಧರಿಸಿದ್ದರು. ವಧು ಪಿಪಿಇ ಕಿಟ್ ಜೊತೆಗೆ  ಫೇಸ್ ಶೀಲ್ಡ್ ,  ಕೈಗವಸುಗಳನ್ನು ಧರಿಸಿ ವಿವಾಹ  ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪಿಪಿಇ ಕಿಟ್‌ಗಳ ನಡುವೆ  ನಡೆದ  ಮದುವೆಯನ್ನು ಕೊರೊನಾ  ವಿವಾಹ ಎಂದು ಅತಿಥಿಗಳು  ಬಣ್ಣಿಸಿದ್ದಾರೆ.

ಸುದ್ದಿ ಓದಿ