ಚಿಕ್ಕೋಡಿಯಲ್ಲಿ ಕೊರೊನಾ ಪರೀಕ್ಷಾ ಘಟಕಕೆ ಮನವಿ
ಚಿಕ್ಕೋಡಿ: ನನ್ನ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಚಿಕ್ಕೋಡಿಯಲ್ಲಿ ಕೊರೊನಾ ಪರೀಕ್ಷೆ ಘಟಕಕ್ಕೆ ಮಂಜೂರಾತಿ ನೀಡಿದ್ದು. ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಘಟಕ ಆರಂಭಿಸಬೇಕೆಂದು ಮನವಿ ಮಾಡಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಚಿಕ್ಕೋಡಿ ನಗರದ ಟ್ರೀಪಾರ್ಕದಲ್ಲಿ ವಿವಿಧ ಔಷಧಿ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಕೊರೊನಾ ಮೂರನೆ ಅಲೆ ಬರದಂತೆ ತಡೆಗಟ್ಟಲು ಎಲ್ಲರೂ ಪ್ರಯತ್ನ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಬೇಡಿಕೆ ಈಡಲಾಗಿದೆ. ವೈದ್ಯಕೀಯ ಕಾಲೇಜು ಮಂಜೂರಾತಿಯಿಂದ 750 ರಿಂದ1000 ಬೆಡ್ ಆಸ್ಪತ್ರೆ ಆರಂಭವಾಗುತ್ತದೆ. ಬೆಳಗಾವಿ ಹೊರತು ಪಡಿಸಿ ಚಿಕ್ಕೋಡಿಯಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿ ನೀಡಬೇಕೆಂದು ಆರೋಗ್ಯ ಸಚಿವ ಸುಧಾಕರ ಅವರಿಗೆ ಮನವಿ ಮಾಡಿದಾಗ ಸಚಿವರು ಸ್ಪಂಧಿಸಿದ್ದಾರೆ ಎಂದರು.
ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು. ಸಮಾಜದ ರಕ್ಷಣೆ ಆಗಬೇಕಾದರೇ ಪರಿಸರ ಉಳಿವು ಅವಶ್ಯಕ. ಪರಿಸರ ಮಾನವನಿಗೆ ಎಲ್ಲವು ಕೊಟ್ಟಿದೆ. ಪರಿಸರ ಸಂರಕ್ಷಣಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಟ್ರಿ ಪಾರ್ಕ ಚಿಕ್ಕೋಡಿ ನಗರದಲ್ಲಿ ವಿಶೇಷ ಪಾರ್ಕ ಆಗಬೇಕು. ಔಷಧಿ ಸಸ್ಯ ಹೆಚ್ಚಾಗಿ ಬೆಳೆಸಬೇಕು. ನಗರದ ಆರೊಗ್ಯ ಹಿತದೃಷ್ಟಿಯಿಂದ ಪಾರ್ಕ ಅನುಕೂಲವಾಗಲಿದೆ ಎಂದರು.
ಸಂಪಾದನ ಸ್ವಾಮೀಜಿ. ಬಸವಜ್ಯೋತಿ ಯುಥ್ ಪೌಂಡೇಶನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ. ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ. ಉಪಾಧ್ಯಕ್ಷ ಸಂಜಯ ಕವಟಗಿಮಠ. ಸದಸ್ಯರಾದ ಸಂತೋಷ ಜೋಗಳೆ. ವಿಶ್ವನಾಥ ಕಾಮಗೌಡ. ನಾಗರಾಜ ಮೇಧಾರ. ಸಂತೋಷ ಟವಳೆ. ಬಾಬು ಮಿಜರ್ೆ. ಸಿದ್ದಪ್ಪ ಡಂಗೇರ. ಮುಖ್ಯಾಧಿಕಾರಿ ಡಾ.ಸುಂದರ ರೋಗಿ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪುರಸಭೆ ಅಧಿಕಾರಿಗಳ ಉಪಸ್ಥಿತರಿದ್ದರು