ರಾಣೆಬೆನ್ನೂರ

ಸಮಾಜದಲ್ಲಿ ಕೊರೊನಾ ವಾರಿಯರ​‍್ಸ‌ಗಳ ಸೇವೆ ಅಪ್ರತಿಮ: ಡಾ.ಶಿವಪ್ರಕಾಶ

ಸಮಾಜದಲ್ಲಿ ಕೊರೊನಾ ವಾರಿಯರ​‍್ಸ‌ಗಳ ಸೇವೆ ಅಪ್ರತಿಮ: ಡಾ.ಶಿವಪ್ರಕಾಶ

ಲೋಕದರ್ಶನ ವರದಿ 


ರಾಣಿಬೆನ್ನೂರ: ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಕೊರೋನಾ ರೋಗಿಗಳ ಪ್ರಾಣವನ್ನು ರಕ್ಷಿಸಲು ಪ್ರಾಮಾಣಿಕವಾಗಿ ಕರ್ತವ್ಯನಿಷ್ಠೆಯನ್ನು ಮೆರೆದಿದ್ದಾರೆ. ಅಂತಹ ಸಂದರ್ಭದಲ್ಲಿ ನೀಡಿದ ಅವರುಗಳ ಸೇವೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ.ಶಿವಪ್ರಕಾಶ ತಂಡಿ ಹೇಳಿದರು. 

 ಅವರು ಇಲ್ಲಿನ ಮಾರುತಿ ನಗರದ ಶಕುಂತಲಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಆಯೋಜಿಸಿದ್ದ ಕೊರೋನ ವಾರಿಯರ​‍್ಸ‌ಗಳಿಗೆ ನಡೆದ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೂಂಡು ಮಾತನಾಡಿದರು. ಮೊದಲನೆ ಹಂತದಲ್ಲಿ ಅಷ್ಟೇನೂ ಪರಿಣಾಮ ಕಾಣದ ಭಾರತಕ್ಕೆ ಎರಡನೇ ಹಂತದಲ್ಲಿ ಸಾವು ನೋವುಗಳೇ ಅಧಿಕವಾದವು. ಇಂತಹ ಸಂದರ್ಭದಲ್ಲಿ ಕೆಲ ವೈದ್ಯರೂ ಸಹ ಕೊರೋನ ರೋಗಕ್ಕೆ ತುತ್ತಾದರು ಎಂದು ವಿಷಾದಿಸಿದ ಡಾಽಽ ತಂಡಿ ಅವರು ಕರ್ತವ್ಯ ನಿಷ್ಠೆಮೆರೆದ ವೈದ್ಯರು ಹಾಗೂ ಶುಶ್ರೂಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂಧಿಗಳು ಕೊರೋನ ವಾರಿಯರ​‍್ಸ‌ಗಳಾಗಿ ಜನರ ಪ್ರಾಣವನ್ನು ರಕ್ಷಿಸಿದರು. ಕೋವಿಡ್‌ಗೆ ತುತ್ತಾಗಿದ್ದ ಕೆಲ ವೈದ್ಯರಿಗೂ ಸಹ ಬೆಡ್ ಸಿಗದೆ ಇರುವಂತಹ ವಾತಾವರಣ ಕಂಡು ಬಂದಿತ್ತು, ಇದೀಗ ಎಲ್ಲ ಸಹಜ ಸ್ಥಿತಿಗೆ ಮರಳಿರುವುದು ಎಲ್ಲರ ಪ್ರಾಮಾಣಿಕ ಕರ್ತವ್ಯಕ್ಕೆ ಸಾಕ್ಷಿಯಾಗಿದೆ ಎಂದರು. 

   ಕಾರ್ಯಕ್ರಮದಲ್ಲಿ ಹಿರಿಯ  ವೈದ್ಯರಾದ ಡಾ. ಬಸವರಾಜ ಕೇಲಗಾರ, ಡಾ. ಜಿ.ಎಂ. ದೇವಗಿರಿಮಠ, ಡಾ. ರವಿ ಕುಲಕರ್ಣಿ, ಶಿವಾನಂದ ಬಗಾಡೆ, ಡಾ.ಜ್ಯೋತಿ ತಂಡಿ  ಡಾ.ನಾಗರಾಜ ದೂಡ್ಡಮನಿ, ಡಾ. ಪಿ. ಶಾಂತಕುಮಾರ, ಡಾ.ಸುಜಾತ, ಡಾ. ಮಾನಸಾ, ಡಾ.ಹಸಿನಾಬಾನು, ಡಾ. ಲಲಿತಾ, ಡಾ. ನಾಗರಾಜ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. 


ಸುದ್ದಿ ಓದಿ