ಕರೊನಾ ವಾರಿಯರ್ಸ್ ಗಳ ಸೇವೆ ಶ್ಲಾಘನೀಯ: ಡಾ.ಶಿವಪ್ರಕಾಶ ತಂಡಿ
ರಾಣಿಬೆನ್ನೂರ 31: ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಕೊರೋನಾ ರೋಗಿಗಳ ಪ್ರಾಣವನ್ನು ರಕ್ಷಿಸಲು ಪ್ರಾಮಾಣಿಕವಾಗಿ ಕರ್ತವ್ಯನಿಷ್ಠೆಯನ್ನು ಮೆರೆದಿದ್ದಾರೆ. ಅಂತಹ ಸಂದರ್ಭದಲ್ಲಿ ನೀಡಿದ ಅವರುಗಳ ಸೇವೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ.ಶಿವಪ್ರಕಾಶ ತಂಡಿ ಹೇಳಿದರು.
ಇಲ್ಲಿನ ಮಾರುತಿ ನಗರದ ಶಕುಂತಲಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಕೊರೋನ ವಾರಿಯರ್ಸಗಳಿಗೆ ಏರಿ್ಡಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೊದಲನೆ ಹಂತದಲ್ಲಿ ಅಷ್ಟೇನೂ ಪರಿಣಾಮ ಕಾಣದ ಭಾರತಕ್ಕೆ ಎರಡನೇ ಹಂತದಲ್ಲಿ ಸಾವು ನೋವುಗಳೇ ಅಧಿಕವಾದವು. ಇಂತಹ ಸಂದರ್ಭದಲ್ಲಿ ಕೆಲ ವೈದ್ಯರೂ ಸಹ ಕೊರೋನ ರೋಗಕ್ಕೆ ತುತ್ತಾದರು ಎಂದರು.
ಕರ್ತವ್ಯ ನಿಷ್ಠೆಮೆರೆದ ವೈದ್ಯರು ಹಾಗೂ ಶುಶ್ರೂಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂಧಿಗಳು ಕೊರೋನ ವಾರಿಯರ್ಸ್ಗಳಾಗಿ ಜನರ ಪ್ರಾಣವನ್ನು ರಕ್ಷಿಸಿದರು. ಕೋವಿಡ್‌ಗೆ ತುತ್ತಾಗಿದ್ದ ಕೆಲ ವೈದ್ಯರಿಗೂ ಸಹ ಬೆಡ್ ಸಿಗದೆ ಇರುವಂತಹ ವಾತಾವರಣ ಕಂಡು ಬಂದಿತ್ತು, ಇದೀಗ ಎಲ್ಲ ಸಹಜ ಸ್ಥಿತಿಗೆ ಮರಳಿರುವುದು ಎಲ್ಲರ ಪ್ರಾಮಾಣಿಕ ಪರಿಶ್ರಮ ಇದೆ ಎಂದರು.
ಡಾ. ನಾಗರಾಜ, ಡಾ.ಶಾಂತಕುಮಾರ, ಡಾ. ಸುಜಾತ, ಡಾ. ಮಾನಸಾ, ಡಾ.ಹಸಿನಾಬಾನು, ಡಾ. ಲಲಿತಾ, ಡಾ. ನಾಗರಾಜ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಬಸವರಾಜ ಕೇಲಗಾರ, ಡಾ. ದೇವಗಿರಿಮಠ, ಡಾ. ರವಿ ಕುಲಕರ್ಣಿ, ಶಿವಾನಂದ ಬಗಾಡೆ, ಡಾ.ಜ್ಯೋತಿ ತಂಡಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಗಳು ಮತ್ತಿತರರು ಇದ್ದರು.