ಮನರಂಜನೆ

ಅಮೆರಿಕದಿಂದ ಕಮಲ್ ಹಾಸನ್​ಗೆ ಕೊರೊನಾ ಪಾಸಿಟಿವ್‌

ಅಮೆರಿಕದಿಂದ ಕಮಲ್ ಹಾಸನ್​ಗೆ ಕೊರೊನಾ ಪಾಸಿಟಿವ್‌

ಚೆನ್ನೈ : ನ. 22  : ತಮಿಳು ನಟ ಕಮಲ್ ಹಾಸನ್  ಅವರಿಗೆ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಇತ್ತೀಚೆಗಷ್ಟೇ ಅವರು ಅಮೆರಿಕದಿಂದ ಮರಳಿದ್ದರು. ನಂತರ ಸ್ವಲ್ಪ ಕೆಮ್ಮು ಇತ್ತು ಎಂದು ಕಮಲ್ ಹಾಸನ್ ಟ್ವೀಟ್​​ನಲ್ಲಿ ಬಹಿರಂಗಪಡಿಸಿದ್ದಾರೆ. ಈಗ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ.


ತಮಿಳಿನಲ್ಲಿ ಟ್ವೀಟ್​ ಮಾಡಿರುವ ಅವರು, ನಾನು ಯುಎಸ್ ನಿಂದ ಹಿಂದಿರುಗಿದ ನಂತರ, ನನಗೆ ಸ್ವಲ್ಪ ಕೆಮ್ಮು ಇತ್ತು.  ಪರೀಕ್ಷೆಗೊಳಪಟ್ಟಾಗ,  ಕೊರೊನಾ ಪಾಸಿಟಿವ್​ ಬಂದಿದೆ. ಚೆನ್ನೈನ ಆಸ್ಪತ್ರೆಯಲ್ಲಿ ನನಗೆ ಕ್ವಾರಂಟೈನ್ ಮಾಡಲಾಗಿದೆ.  ಕೊರೊನಾ ಇನ್ನೂ ಹೋಗಿಲ್ಲ ಮತ್ತು ಅತ್ಯಂತ ಮುನ್ನೆಚ್ಚರಿಕೆ  ತೆಗೆದುಕೊಳ್ಳಬೇಕು ಅನ್ನೋದನ್ನ ಜನರು ಅರಿತುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ಸುದ್ದಿ ಓದಿ