ನಟಿ ನೋರಾ ಫತೇಹಿಗೆ ಕೊರೋನಾ ಪಾಸಿಟಿವ್
ಮುಂಬೈ, ಡಿಸೆಂಬರ್ 30:ನಟಿ ನೋರಾ ಫತೇಹಿ ಅವರಿಗೆ ಕೋವಿಡ್ -19 ದೃಢಪಟ್ಟಿದ್ದು, ಸದ್ಯ ವೈದ್ಯರ ನಿಗಾದಲ್ಲಿ ಕ್ವಾರಂಟೈನ್ನಲ್ಲಿದ್ದಾರೆನೋರಾ ಅವರ ವಕ್ತಾರರು ಹೇಳಿದರು: “ನೋರಾ ಫತೇಹಿ ಅವರ ಪರವಾಗಿ, ಅವರ ವಕ್ತಾರರಾಗಿ, ನೋರಾ ಫತೇಹಿ ಅ ವರಿಗೆ ಡಿಸೆಂಬರ್ 28 ರಂದು ಕೋವಿಡ್ ಕಾಣಿಸಿಕೊಂಡಿದೆ ಎಂದು ವಕ್ತಾರರು ತಿಳಿಸಿದರು.ಕೋವಿಡ್ ನಿಯಮಗಳ ಅನುಸಾರ ನೋರಾ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಸುರಕ್ಷತೆ ಮತ್ತು ನಿಬಂಧನೆಗಳಿಗಾಗಿ ಬಿಎಂಸಿಯೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.ನೋರಾ ಇತ್ತೀಚೆಗೆ ಎಲ್ಲಿಯೂ ಹೊರಬಂದಿಲ್ಲ. ಹರಿದಾಡಿದ ಚಿತ್ರಗಳು ಹಳೆಯ ಫೋಟೊಗಳು ಎಂದು ವಕ್ತಾರರು ದೃಢಪಡಿಸಿದರು.