ಕೊರೋನಾ: ಉಪಚುನಾವಣೆ ಕರ್ತವ್ಯಕ್ಕೆ ಹಾಜರಾದ ಮೃತ ಸಿಬ್ಬಂದಿ ಮಾಹಿತಿ ಒದಗಿಸಲಿ
ಚಿಕ್ಕೋಡಿ 11:: ಇತ್ತಿಚ್ಚೆಗೆ ನಡೆದ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆಯ ಉಪಚುನಾವಣೆಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಎಷ್ಟು ಸಿಬ್ಬಂದಿಗಳು ಕೊರೊನಾ ಸೋಕಿನಿಂದ ಮೃತಪಟ್ಟಿರುವ ಕುರಿತು ಮಾಹಿತಿ ಹಕ್ಕು ಅದಿನಿಯಮದಡಿ ಅಜರ್ಿ ಸಲ್ಲಿಸಲಾಗಿದೆ. ಆದರೆ ಇನ್ನೂವರೆಗೂ ಅಧಿಕಾರಿಗಳಿಂದ ಉತ್ತರ ದೊರೆತ್ತಿಲ್ಲ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ-ಏಪ್ರೀಲ್ ತಿಂಗಳಲ್ಲಿ ನಡೆದ ಬೆಳಗಾವಿ ಲೋಕಸಭೆಯ ಉಪಚುನಾವಣೆ, ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆಯ ಉಪಚುನಾವಣೆಯನ್ನು ನಡೆಸಿದ್ದರಿಂದ ಕರ್ತವ್ಯಕ್ಕಾಗಿ ಹಾಜರಾಗಿದ್ದ, ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೃತ ಕುಟುಂಭಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೊನಾ ಸೋಂಕಿಗೆ ಎಷ್ಟು ಸಿಬ್ಬಂದಿ ಮೃತರಾಗಿರುವ ಕುರಿತು ಆರ್ಟಿಐ ಕಾಯ್ದೆಯಡಿ ಬೆಳಗಾವಿ, ಬಿದರ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಕಳೆದ ಒಂದು ತಿಂಗಳ ಹಿಂದೆ ಮಾಹಿತಿ ಕೇಳಲಾಗಿದೆ.
ಉಪಚುನಾವಣೆ ಸಂದರ್ಭದಲ್ಲಿ ಏಷ್ಟುಜನ ಕೊರೊನಾ ಕಾಯಿಲೆಗೆ ಬಲಿಯಾಗಿದ್ದಾರೆ ಎಂಬುದನ್ನು ಸಕರ್ಾರ ಏಕೆ ಪ್ರಕಟಿಸುತ್ತಿಲ್ಲ, ಬಲಿಯಾದವರ ಕುಟುಂಬಗಳು ಬೀದಿಪಾಲಾಗುತ್ತಿವೆ, ಅವರಿಗೆ ನ್ಯಾಯ ದೊರಕಿಸಬೇಕಿದೆ ಶೀಘ್ರ ಮಾಹಿತಿ ಒದಗಿಸಿದ್ದಲ್ಲಿ ನೊಂದ ಕುಟುಂಬದವರಿಗೆ ನ್ಯಾಯ ಒದಗಿಸಲಾಗುವುದು ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು