ಸಹಕಾರ ಸಂಘಕ್ಕೆ 28 ಲಕ್ಷ ನಿವ್ವಳ ಲಾಭ : ಜಿ.ಕಾಶೀಂಸಾಬ್
ಲೋಕದರ್ಶನ ವರದಿ
ಸಹಕಾರ ಸಂಘಕ್ಕೆ 28 ಲಕ್ಷ ನಿವ್ವಳ ಲಾಭ : ಜಿ.ಕಾಶೀಂಸಾಬ್
ಕಂಪ್ಲಿ 12: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಾಕರ ಸಂಘವು 2025-26 ನೇ ಸಾಲಿನಲ್ಲಿ 28ಲಕ್ಷದ 3 ಸಾವಿರದ 358 ರೂಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಜಿ.ಕಾಶೀಂಸಾಬ್ ತಿಳಿಸಿದರು.
ಅವರು ಸಂಘದ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಘವು 9 ಕೋಟಿ 69 ಲಕ್ಷದ 3 ಸಾವಿರ ರೂಗಳ ವ್ಯವಹಾರವನ್ನು ನಡೆಸಿ ಉತ್ತಮ ಲಾಭವನ್ನು ಗಳಿಸಿದೆ ಎಂದರು.
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಇ. ಜಡೇಶರೆಡ್ಡಿ ಮಾತನಾಡಿ, ಸಂಘವು 3924 ಸದಸ್ಯರನ್ನು ಹೊಂದಿದ್ದು, 128.10 ಲಕ್ಷರೂಗಳ ಸದಸ್ಯರ ಷೇರುಬಂಡವಾಳ ಮತ್ತು ಜಿ.ಪಂ.ಷೇರು ಧನ 1.42.ಲಕ್ಷರೂ ಮತ್ತು ರಾಜ್ಯ ಸರ್ಕಾರದ ಷೇರು ಧನ 1.40.ಲಕ್ಷರೂಗಳು ಸೇರಿದಂತೆ ಒಟ್ಟು 130.92.ಲಕ್ಷರೂಗಳನ್ನು ದುಡಿಯುವ ಬಂಡವಾಳದಲ್ಲಿ ತೊಡಗಿಸಿದೆ. ಸಂಘವು 320.14.ಲಕ್ಷ ರೂಗಳ ಠೇವಣಿಯನ್ನು ಹೊಂದಿದೆ. ಈ ಠೇವಣಿಯ ಮೊತ್ತವನ್ನು ಕೃಷಿಯೇತರ ಉದ್ದೇಶಗಳಿಗೆ ನೀಡಲ್ಪಡುವ ಬಿಡಿಪಿ ಸಾಲ ಸೇರಿದಂತೆ ವ್ಯಾಪಾರಿ ಚಟುವಟಿಕೆಗಳಿಗೆ ವಿನಿಯೋಗಿಸಲ್ಪಟ್ಟಿದೆ ಎಂದರು.
ಸುಮಾರು 853.01.ಲಕ್ಷರೂಗಳ ಕೃಷಿ ಸಾಲವನ್ನು ವಿತರಿಸಲಾಗಿಸ್ದು, ಶೇ.98 ರಷ್ಟು ವಸೂಲಾತಿಯಾಗಿದೆ. ಸುಮಾರು 423.79 ಲಕ್ಷರೂಗಳ ಕೃಷಿಯೇತರ ಸಾಲವನ್ನು ವಿತರಿಸಲಾಗಿದ್ದು, ಶೇ.85ರಷ್ಟು ಸಾಲ ವಸೂಲಾತಿಯಾಗಿದೆ ಎಂದರು.ಸಹಕಾರ ಸಂಘದಿಂದ ಜೋಳ ಖರೀದಿ ಕೇಂದ್ರವನ್ನು ಆರಂಭಿಸಿದ್ದು, 1262 ರೈತರಿಂದ 58278 ಕ್ವಿಂಟಲ್ ಜೋಳವನ್ನು ಖರೀದಿಸಲಾಗಿದೆ. ರೈತರಿಂದ ಜೋಳ ಠೇವಣಿ ರಸೀದಿ ಪಡೆದು ಹಣ ಪಾವತಿಸಲು ಕ್ರಮಗಳನ್ನು ಕೈಗೊಳ್ಳಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಹಾಗೂ ಅಫೆಕ್ಸ್ ಬ್ಯಾಂಕ್ ನಿರ್ದೇಶಕರಾದ ಪಿ.ಮೂಕಯ್ಯಸ್ವಾಮಿ ಮಾತನಾಡಿ ಸಹಕಾರ ಸಂಘದ ವ್ಯವಹಾರಿಕ ಬ್ಯಾಂಕ್ ಆಗಿರುವ ಬಿಡಿಸಿಸಿ ಬ್ಯಾಂಕಿನ ಶಾಖೆಯನ್ನು ಎಮ್ಮಿಗನೂರು ಗ್ರಾಮದಲ್ಲಿ ನೂತನವಾಗಿ ಆರಂಭಿಸಿದ್ದು ರೈತರು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ ಮಹಾಜನ ಸಭೆಯಲ್ಲಿ ಭಾಗವಹಿಸಿ ಸಹಾಕರ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಿಡಿಸಿಸಿ ಬ್ಯಾಂಕಿನ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಮಹಾಜನ ಸಭೆಯಲ್ಲಿ ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷರಾದ
ಈ ಸಂದರ್ಭದಲ್ಲಿ ಸಿದ್ದಮ್ಮನಹಳ್ಳಿ ಅಲ್ಲಾಸಾಬ್, ನಿರ್ದೇಶಕರುಗಳಾದ ಬೇರ್ಗಿ ಮಹೇಶಗೌಡ, ಎಚ್.ಫಕ್ಕೀರ್ಪ, ಕಬ್ಬೇರ್ ಶೇಖರ್ಪ, ಎನ್.ಅಮರೇಶ್, ಜೀರ್ ಉಮಾಪತಿ, ನೆಲ್ಲುಡಿ ರಾಜಾಸಾಬ್, ದೇವಮನೆ ರಂಜಾನ್ ಸಾಬ್, ಟಿ.ರಾಮು, ತಿಪ್ಪಮ್ಮ ಕರೆಮರೆ ಗಂಗಮ್ಮ, ಕ್ಷೇತ್ರಾಧಿಕಾರಿ ಬಿ.ರಾಮಚಂದ್ರ್ಪ, ಮುಖಂಡರಾದ ಸದಾಶಿವಪ್ಪ,
ಸಿಬ್ಬಂದಿಗಳಾದ ಎಚ್.ಮಹೇಶ್, ಪಿ.ಸಾಯಿಬಣ್ಣ, ಎಂ.ಖಾದರ್ ಭಾಷಾ, ಕೆಮಾರೆಣ್ಣ, ಎಸ್.ಶರಣಬಸವನಗೌಡ, ಬಿ.ಹಸನ್ ಸಾಬ್ ಸೇರಿದಂತೆ ಇತರರು ಇದ್ದರು.
12-ಕಂಪ್ಲಿ-03: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪ್ರಾ.ಕೃ.ಪ.ಸ.ಸಂಘದ ಮಹಾಜನ ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ಹಾಗೂ ಅಫೆಕ್ಸ್ ಬ್ಯಾಂಕ್ ನಿರ್ದೇಶಕರಾದ ಪಿ.ಮೂಕಯ್ಯಸ್ವಾಮಿ ಮಾತನಾಡಿದರು.