ಅಡುಗೆ ಅನಿಲ ಬಳಕೆ ಮತ್ತು ಮುಂಜಾಗೃತ ಕ್ರಮ ಕಾರ್ಯಾಗಾರ
ರಾಣೇಬೆನ್ನೂರು 13: ನಗರ ಹೂರ ವಲಯದ ಆರ್.ಟಿ.ಇ.ಎಸ್. ಕಾಲೇಜು ಭವನದಲ್ಲಿ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಅಡುಗೆ ಅನಿಲ ಬಳಕೆ ಮತ್ತು ಮುಂಜಾಗೃತ ಕ್ರಮ ಕುರಿತಂತೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರವು ನಡೆಯಿತು.
ಈ ಕುರಿತು ಪ್ರಾತ್ಯೆಕ್ಷಿಕೆ ಮೂಲಕ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದ ಬೀರ್ಪ ಕೆ.ಸಿ. ಅವರು ಅಡುಗೆ ಅನಿಲ ಬಳಕೆಯಿಂದ ಅನೂಕೂಲವಾಗಿದೆ. ಈ ಕುರಿತು ಕೆಲವು ಸಂಧರ್ಭದಲ್ಲಿ ಸೂರಿಕೆ ಉಂಟಾದಾಗ ಧೈರ್ಯಗೆಡದೆ ಶಾಂತ ಚಿತ್ತತೆಯಿಂದ ಸೂರಿಕೆಯ ಸ್ಥಳವನ್ನು ಗುರುತಿಸಿ ಅಕ್ಕ ಪಕ್ಕದಲ್ಲಿರುವ ಯಾವುದೇ ದೀಪದ ಜೋತಿಗಳು ಬೆಳಗದಂತೆ ತಕ್ಷಣವೆ ಆರಿಸಬೇಕು. ಒಟ್ಟಾರೆ ಸೂರಿಕೆಯಲ್ಲಿ ಕಡ್ಡಿ ಗಿರುವುದು, ಗ್ಯಾಸ್ ಲೈಟರ್ ಹಚ್ಚುವುದು ಮತ್ತು ಮನೆಯೂಳಗಿನ ಲೈಟ್ ಬಟನ್ ಹಚ್ಚುವುದು ಮಾಡಬಾರದು. ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು. ಇತ್ತೀಚಿನ ಕೆಲವು ವರ್ಷಗಳಿಂದ ಅನಿಲ ಸೂರಿಕೆಯಿಂದ ಯಾವುದೇ ತೂಂದರೆಯಾಗದಂತಹ ಆವಿಷ್ಕಾರಗೂಂಡ ಅಳವಡಿಸುವ ಮಷೀನ್ಗಳು ಬಂದಿವೆ. ಸಂಪೂರ್ಣ ಸುರಕ್ಷತೆಗಾಗಿ ಇಂತಹ ಮಷೀನ್ಗಳನ್ನು ಅಳವಡಿಸಿಕೂಳ್ಳಬೇಕು ಎಂದರು.
ಕಾಲೇಜು ಪ್ರಾಚಾರ್ಯ ಎಫ್.ಹೆಚ್. ಮಾಚೇನಹಳ್ಳಿ, ಉಪನ್ಯಾಸಕ ಸಿ.ಎ. ಹರಿಹರ, ಬಿದರಿ ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಸರಸ್ವತಿ ಹೆಚ್. ಬಮ್ಮನಾಳ ಸೇರಿದಂತೆ ಮತ್ತಿತರ ಉಪನ್ಯಾಸಕರು , ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.