ಶಿಗ್ಗಾವ್

ಸ್ವಸಹಾಯ ಸಂಘಗಳ ಸಮಾವೇಶ,ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಸ್ವಸಹಾಯ ಸಂಘಗಳ ಸಮಾವೇಶ,ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಶಿಗ್ಗಾವಿ :ಮಹಿಳೆಯರ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆಯು ದಾರೀದೀಪವಾಗಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಿಷ್ಠವಾಗಿಸುವ ಮತ್ತು ಮಹಿಳೆಯರಿಗೆ ನಾಯಕತ್ವ ನೀಡುವ ಒಕ್ಕೂಟಗಳ ಪರಿಕಲ್ಪನೆಅದ್ಭುತವಾಗಿದೆಎಂದು ಬಂಕಾಪುರ  ಕೆಂಡದಮಠದ ರೇವಣಸಿದ್ದೇಶ್ವರ ಶ್ರೀಗಳು ಹೇಳಿದರು. 

ತಾಲೂಕಿನ ಅರಟಾಳ ಪಾಶ್ರ್ಶ್ವನಾಥ ಸಭಾಭವನದಲ್ಲಿ ದುಂಡಶಿ ಜಕ್ಕಿನಕಟ್ಟಿ ವಲಯದ ಸ್ವಸಹಾಯ ಸಂಘಗಳ ಸಮಾವೇಶ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

 ನಾವೆಲ್ಲರೂ ಬೇರೆ ಬೇರೆ ಸಮುದಾಯದದಲ್ಲಿ ಹುಟ್ಟಿರಬಹುದು ಆದರೆ ಮಾನವ ಧರ್ಮ ಎಲ್ಲಾಕಿಂತ ಶ್ರೇಷ್ಠವೆಂದು ಬಸವಾದಿ ಶರಣರು ಈ ನಾಡಿಗೆ ಸಂದೇಶ ಸಾರಿದ್ದಾರೆ "ಸಂತ ಶಿಶುನಾಳ ಶರೀಫರು ಗುರುಗೋವಿಂದರ ಅನ್ಯೋನತೆ ನಮಗೆ ಮಾದರಿಯಾಗಿದೆ" ಇದೇ ತತ್ವವನ್ನು ಸ್ವಸಹಾಯ ಸಂಘಗಳ ಮೂಲಕ ಈ ನಾಡಿಗೆ ಪರಿಚಯಿಸಿದ ಕೀರ್ತಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು. 

ಧಾರವಾಡ ಪ್ರಾದೇಶಿಕ ದುಗ್ಗೇಗೌಡ ಮಾತನಾಡಿ ಕಳೆದ 40 ವರ್ಷಗಳ ಪಯಂರ್ತ ಸಂಸ್ಥೆಯು ರಾಜ್ಯಾಧ್ಯಂತ ಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದಿದೆ ಮಹಿಳಾ ಸಬಲೀಕರಣ ಮತ್ತು ರೈತರ ಶ್ರೇಯೋಭಿವೃದ್ಧಿಗೆ ಬ್ಯಾಂಕಿನ ಸೇವೆಗಳು, ಆರೋಗ್ಯ ಸೇವೆಗಳು ಸಮುದಾಯದ ಕಾರ್ಯಕ್ರಮಗಳಲ್ಲಿ ಶಿಕ್ಷಣ, ಕೆರೆ ನಿರ್ಮಾಣ, ಮದ್ಯವರ್ಜನ ಶಿಬಿರಗಳು, ಜನಮಂಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. 

ಹೊಸೂರ ಗ್ರಾ. ಪಂ.ಅಧ್ಯಕ್ಷ ಅಣ್ಣಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು, ಸಿ.ಬಿ.ಯಲಿಗಾರ ಸೇವಾಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ಜನಜಾಗೃತಿ ವೇದಿಕೆ ಸದಸ್ಯ ಪ್ರಕಾಶ್ ಪಾಸರ, ಈರಣ್ಣ ಸಮಗೊಂಡ, ಭೀಮರೆಡ್ಡಿ ನಡುವಿನಮನಿ, ಅಂದಾಲಗಿಗ್ರಾ. ಪಂ.ಅಧ್ಯಕ್ಷೆ ವಿನೋದಕರಿ ಗುದರಿ, ಭಾರತಿಛಬ್ಬಿ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು 

ನಾಗರಾಜ್ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು, ಜಯರಾಮ್ ವರದಿ ವಾಚಿಸಿದರು,ದುರ್ಗೇಶ್ ವಂದಿಸಿದರು, ಶಿಗ್ಗಾವಿ ಯೋಜನಾಧಿಕಾರಿಉಮಾಎನ್‌.ಜಿ. ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ