ಶಿಗ್ಗಾವ್

ಕನ್ನಡಿಗರ ತೆರಿಗೆ ಪಾಲನ್ನು ಕೊಟ್ಟು ಅಭಿವೃದ್ಧಿಗೆ ಸಹಕರಿಸಿ: ಮಂಜುನಾಥ

ಕನ್ನಡಿಗರ ತೆರಿಗೆ ಪಾಲನ್ನು ಕೊಟ್ಟು ಅಭಿವೃದ್ಧಿಗೆ ಸಹಕರಿಸಿ: ಮಂಜುನಾಥ

ಶಿಗ್ಗಾವಿ 04: ಬಸವ ನಾಡಿನ ಸ್ವಾಭಿಮಾನಿ ಕನ್ನಡಿಗರಿಗೆ ಅನ್ಯಾಯ ಮಾಡಬೇಡಿ ಕೇಂದ್ರ ಸರ್ಕಾರದಿಂದ ಕೊಡಬೇಕಾಗಿರುವ ಕನ್ನಡಿಗರ ತೆರಿಗೆ ಪಾಲನ್ನು ಕೊಟ್ಟು ಅಭಿವೃದ್ಧಿಗೆ ಸಹಕರಿಸಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಣ್ಣನವರ್ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಆಗ್ರಹ ಮಾಡಿದ್ದಾರೆ. 

ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಕನ್ನಡಿಗರ ಪಾಲಿನ ತೆರಿಗೆ ಹಣವನ್ನು ಕೊಡುವಲ್ಲಿ ಉದ್ದೇಶಪೂರ್ವಕ ತಡೆ ಮಾಡಿ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿರುವ ಕೇಂದ್ರ ಸರ್ಕಾರದ ನಿರ್ಲಕ್ಷ ಧೋರಣೆ ಎಷ್ಟು ಸರಿ ಕೊಡಬೇಕಾದ ರಾಜ್ಯದ ಪಾಲಿನ ತೆರಿಗೆ ಕೊಡದಿರುವುದು ಹತ್ತು ವರ್ಷಗಳಿಂದಲೂ ಕರ್ನಾಟಕದ ವಿವಿಧ ನೀರಾವರಿ ಯೋಜನೆಗಳಿಗೆ ಚುನಾವಣೆಗಳ ಪೂರ್ವದಲ್ಲಿ ಹೇಳುವುದು ಒಂದು ಚುನಾವಣೆ ನಂತರ ಯೋಜನೆಗಳಿಗೆ ಅನುಮತಿಯು ಕೊಟ್ಟಿಲ್ಲ ಬಜೆಟ್‌ನಲ್ಲಿ ಹೇಳಿರುವಂತೆ ಅನುದಾನವನ್ನು ರಾಜ್ಯಕ್ಕೆ ನೀಡಿರುವುದಿಲ್ಲ ಅನ್ನು ಅಂಕಿ ಅಂಶ ಸಹಿತ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು ಕೇಂದ್ರ ಸರ್ಕಾರ ಹಾಗೂ  ಪ್ರಧಾನಿಗಳು ಹಾಗೂ ಹಣಕಾಸು ಸಚಿವರು ಸ್ವಾಭಿಮಾನಿ ಕನ್ನಡಿಗರ ಪ್ರಮೆಯನ್ನು ಪರೀಕ್ಷಿಸದೆ ರಾಜ್ಯದ ಪಾಲನ್ನು ರಾಜಕೀಯ ನೀಡಿ ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ನಾನೊಬ್ಬ ಕನ್ನಡಿಗನಾಗಿ ಸಾಮಾಜಿಕ ಹೋರಾಟಗಾರನಾಗಿ ಆಧಾರಣೀಯ ಪ್ರಧಾನಿಗಳಲ್ಲಿ ಹಾಗೂ ಹಣಕಾಸು ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು. 


ಸುದ್ದಿ ಓದಿ