ಶಿಗ್ಗಾವ್

ಕಳಪೆ ಸಾಮಾಗ್ರಿ ಬಳಸುತಿರುವ ಗುತ್ತಿಗೆದಾರರು, ತನಿಖೆಗೊಳಪಡಿಸಬೇಕು : ಸದಸ್ಯರ ಒತ್ತಾಯ

ಕಳಪೆ ಸಾಮಾಗ್ರಿ ಬಳಸುತಿರುವ ಗುತ್ತಿಗೆದಾರರು, ತನಿಖೆಗೊಳಪಡಿಸಬೇಕು : ಸದಸ್ಯರ ಒತ್ತಾಯ

ಶಿಗ್ಗಾವಿ, 10 : ಪುರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರುಗಳ ಆಡಳಿತವೇ ಹೆಚ್ಚು ನಡೆಯುತ್ತಿದೆ. ನಾಮ ನಿರ್ದೇಶೀತ ಸದಸ್ಯರು ಮತ್ತುಚುನಾಯಿತ ಸದಸ್ಯರ ನಡುವೆ ಕೊಳಗೇರಿ ನಿವಾಸಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ವಿಷಯಗಳ ಕುರಿತು ಮಾತಿನ ಸಮರ ಸಾಮಾನ್ಯ ಸಭೆಯಲ್ಲಿ ನಡೆಯಿತು. 

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೊಳಚೆ ಪ್ರದೇಶದಲ್ಲಿ ನಿರ್ಮಾಣವಾಗುವ ಮನೆಗಳ ಮಾಹಿತಿ ಪುರಸಭೆಗೆ ನೀಡಿಲ್ಲ. ಕಾನೂನು ಬಾಹೀರವಾಗಿ ಕಾಮಗಾರಿ ನಡೆಯುತ್ತಿದೆ. ಲಕ್ಷಾಂತರ ರೂ. ಅವ್ಯವಹಾರ ನಡೆದು, ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಕೈಗೊಂಡ ಕೊಳಗೇರಿ ಮಂಡಳಿ ಅಧಿಕಾರಿಗಳ ಕರೆದು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ. 7 ನೂರಕ್ಕೂ ಹೆಚ್ಚು ಮನೆ ನಿರ್ಮಾಣವಾಗುತ್ತಿದ್ದರೂ ಗುಣಮಟ್ಟದ ಸಾಮಾಗ್ರಿ ಬಳಸದೆ ಗುತ್ತಿಗೆದಾರರು, ಮನ ಬಂದಂತೆ ಮನೆ ಕಟ್ಟುತ್ತಿದ್ದಾರೆ ತನಿಖೆಗೊಳಪಡಿಸಬೇಕು ಎಂದು ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಒತ್ತಾಯಿಸಿದರು. 

ಪುರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರುಗಳ ಆಡಳಿತವೇ ಹೆಚ್ಚು ನಡೆಯುತ್ತಿದೆ ಎಂದು ಸದಸ್ಯ ಗೌಸಖಾನ ಮುನಸಿ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಅಧ್ಯಕ್ಷರು ಶೀಘ್ರದಲ್ಲಿಯೇ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದರು. ಸಭೆಗೆ ಕೆಲವೊಂದಿಷ್ಟು ವಿಚಾರ, ಸಲಹೆಗಳನ್ನು ಮಂಡಿಸಿದ ನಾಮನಿರ್ದೇಶಿತ ಮಂಜುನಾಥ ಮಣ್ಣಣ್ಣವರ ಅವರಿಗೆ ಸದಸ್ಯ ಸುಭಾಸ ಚವ್ಹಾಣ ಸಭೆಗೆ ಸಲಹೆ ಕೊಡಬಹುದು ಹೊರತು, ಪರ, ವಿರೋಧ ವ್ಯಕ್ತಪಡಿಸುವ ಹಕ್ಕಿಲ್ಲ ಎಂದು ಪ್ರತಿಪಾದಿಸಿದಾಗ ಅಕ್ರೋಶಗೊಂಡ ಮಣ್ಣಣ್ಣವರ, ಹಾಗಾದರೇ ಸಭೆಯಿಂದ ನಾವು ಹೊರ ಹೋಗುತ್ತೇವೆ ಎಂದು ಹೊರಟರು. ಆಗ ಹೊರ ಹೋಗಲು ಹೇಳುತ್ತಿಲ್ಲ. ಕಾನೂನು ತಿಳಿಸುತ್ತಿದ್ದೇವೆ ಎಂದು ಹೇಳಿದಾಗ ನನಗೂ ಗೊತ್ತಿದೆ ಸಲಹೆ ಸ್ವೀಕರಿಸಿ ಎಂದಷ್ಟೇ ಹೇಳಿ ಚರ್ಚೆಯಲ್ಲಿ ಪಾಲ್ಗೊಂಡರು. 

ಮನೆಗಳ ಕಾಮಗಾರಿಯಲ್ಲಿ ಸಾಕಷ್ಟುಅವ್ಯವಹಾರಆರೋಪಕ್ಕೆ ಸ್ಪಂದಿಸಿದ ಅಧ್ಯಕ್ಷ ಸಿದ್ದಾರ್ಥಗೌಡ್ರ ಪಾಟೀಲ, ವಿಶೇಷ ಸಭೆಯೊಂದನ್ನು ಆಯೋಜಿಸಿ, ಅಧಿಕಾರಿಗಳನ್ನು ಆಹ್ವಾನಿಸಿ ಪಟ್ಟಣದ ಬಡವರಿಗೆಆಗುತ್ತಿರುವ ಸಮಸ್ಯೆ ಬಗ್ಗೆ ಪರೀಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.ಜೊತೆಗೆ ವಿವಿಧ ಸಮಾಜಗಳಿಗೆ, ಸಂಘ-ಸಂಸ್ಥೆಗಳಿಗೆ ಜಾಗ ನೀಡಲು ಮನವಿ ಪ್ರಸ್ತಾಪ ಮಂಡಿಸಿದವರಿಂದ ದಾಖಲೆಗಳನ್ನು ಸ್ವೀಕರಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. 

ಊರಲಿದ್ದ ಸರಕಾರಿ ಕಚೇರಿಗಳನ್ನು ಊರು ಹೊರಗೆ ಹಾಕಿ ವ್ಯಾಪಾರ ವಹಿವಾಟುಗಳಿಗೆ ಕೊಕ್ಕೆ ಹಾಕಿದ್ದೀರಿಎಂದುಗೌಸಖಾನ್ ಮುನಸಿ ಬಿಜೆಪಿ ಸದಸ್ಯರತ್ತ ಬೆರಳು ಮಾಡಿಅಸಮಾಧಾನ ವ್ಯಕ್ತಪಡಿಸಿದರು.ಸದಸ್ಯ ಬುಳ್ಳಕ್ಕನವರ, ಸಿಂಧೂರು ಅವರಿದ್ದಾಗಆಗಿದೆ ಹೊರತು, ಬೊಮ್ಮಾಯಿಅವರಕಾಲದಲ್ಲಲ್ಲಎಂದು ಸ್ಪಷ್ಟಪಡಿಸಿದರು. 

ಸಭೆಯಲ್ಲಿಉಪಾಧ್ಯಕ್ಷ ಶಾಂತಾಬಾಯಿ ಸುಬೇದಾರ, ಸದಸ್ಯರಾದ ಪರಶುರಾಮ ಸೊನ್ನದ, ಸುಭಾಸಚವ್ಹಾಣ, ದಯಾನಂದ ಅಕ್ಕಿ, ಸುಲೇಮಾನತರ್ಲಘಟ್ಟ, ಜಾಫರ ಪಠಾಣ, ರಮೇಶ ವನಹಳ್ಳಿ, ಮಂಜುನಾಥ ಬ್ಯಾಹಟ್ಟಿ, ವಸಂತಾ ಬಾಗೂರು, ಅನುರಾಧ ಮಾಳವದೆ, ಮಂಜುನಾಥ ಮಣ್ಣಣ್ಣವರ, ಚಂದ್ರುಕೊಡ್ಲಿವಾಡ, ಸೇರಿದಂತೆಇತರ ಸದಸ್ಯರಿದ್ದರು. 


ಸುದ್ದಿ ಓದಿ