ಸತತ ಸುರಿದ ಮಳೆ: ಅಂಕಸಾಪುರ ಗ್ರಾಮದ ಚೌಡೇಶ್ವರಿ ದೇವಸ್ಥಾನ ನೆಲಕ್ಕೆ
ಲೋಕದರ್ಶನ ವರದಿ
ರಾಣೇಬೆನ್ನೂರ 20: ತಾಲೂಕಿನ ಅಂಕಸಾಪುರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಇರುವ ಚೌಡೇಶ್ವರಿ ದೇವಿಯ ದೇವಸ್ಥಾನವು, ಕಳೆದ 3 ದಿವಸಗಳಿಂದ ಸತತವಾಗಿ ಸುರಿದ ಮಳೆಗೆ ಮೇಲ್ಛಾವಣೆ ಕುಸಿದು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿರುವುದಾಗಿ ಗ್ರಾಮಸ್ತರು ತಿಳಿಸಿದ್ದಾರೆ.