ಶಿಗ್ಗಾವ್

ಮಹಾ ಪುರಾಣ ಪ್ರವಚನಕಾರ್ಯಕ್ರಮ ನಿಮಿತ್ಯ ನಿರಂತರ ಪ್ರಸಾದ ಸೇವೆ

ಮಹಾ ಪುರಾಣ ಪ್ರವಚನಕಾರ್ಯಕ್ರಮ ನಿಮಿತ್ಯ ನಿರಂತರ ಪ್ರಸಾದ ಸೇವೆ

ಲೋಕದರ್ಶನ ವರದಿ

ಶಿಗ್ಗಾವಿ 21: ಪಟ್ಟಣದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಗಂಜೀಗಟ್ಟಿ ಶಿಗ್ಗಾವಿ ಆಶ್ರಯದಲ್ಲಿ ಶರನ್ನವರಾತ್ರಿ ಮಹಾ ಪುರಾಣ ಪ್ರವಚನ ಕಾರ್ಯಕ್ರಮ  ನಿಮಿತ್ಯ ಪಟ್ಟಣದ ವಿವಿಧ ಗಣ್ಯಮಾನ್ಯರು ಹಾಗೂ ಸಂಘ ಸಂಸ್ಥೆಗಳು ಹಾಗೂ ವಿವಿಧ ಓಣಿಯ ವತಿಯಿಂದ ನಿರಂತರ ಪ್ರಸಾದ ಸೇವೆಯನ್ನು ಸಧಭಕ್ತರು ನಿರ್ವಹಿಸುತ್ತಿದ್ದಾರೆ.

   ನಿರಂತರವಾಗಿ ಪ್ರಸಾದ ಸೇವೆಯನ್ನು ಬ್ರಹ್ಮಾವರ ಕುಟುಂಬ ವರ್ಗದವರಿಂದ, ಹಾಗೂ ಗ್ರಾಮದೇವಿ ಓಣಿಯ ಮಹಿಳೆಯರಿಂದ ಉಡಿ ಹಾಗೂ ಪ್ರಸಾದ ಸೇವೆ, ವಿವೇಕ ಜಾಗೃತ ಬಳಗದಿಂದ ಉಡಿ ಮತ್ತು ಪ್ರಸಾದ ಸೇವೆ, ಪೋಲಿಸ ಅಧಿಕಾರಿ ಶಿವಾನಂದ ಮೊ. ವನಹಳ್ಳಿ ಕುಟುಂಬ ವರ್ಗದವರಿಂದ ಪ್ರಸಾದ ಸೇವೆ ಹಾಗೂ ಮುದಿಗೌಡ್ರ ಕುಟುಂಬ ವರ್ಗದವರಿಂದ ಪ್ರಸಾದ ಸೇವೆ, ಆನಂದ ಪತ್ರೆಪ್ಪ ನರಗುಂದ ಕುಟುಂಬ ವರ್ಗದವರಿಂದ ಪ್ರಸಾದ ಸೇವೆ, ಮುತ್ತು ಜಗದೀಶ ಯಲಿಗಾರ ಕುಟುಂಬ ವರ್ಗದವರಿಂದ ಪ್ರಸಾದ ಸೇವೆ, ಬಶಟ್ಟೇಪ್ಪ ಸಿ.ಯಲಿಗಾರ ಕುಟುಂಬ ವರ್ಗದವರಿಂದ ಪ್ರಸಾದ ಸೇವೆ, ಬೂಧರಾವ ಬೆಳಗಲಿ ಕುಟುಂಬ ವರ್ಗದಿಂದ ಪ್ರಸಾದ ಸೇವೆ, ಹಳೇ ಪೇಟೆಓಣಿಯ ಸದ್ಭಕ್ತರಿಂದ  ಅನ್ನ ಸಂತರ್ಪಣೆ ಕಾರ್ಯಕ್ರಮ ನೇರವೇರಿದ್ದು ಇಂದು ವಿಶೇಷವಾಗಿತ್ತು ಅಲ್ಲದೇ ಸೋಮವಾರದವರೆಗೆ ಪುರಾಣ ಪ್ರವಚನ ಕಾರ್ಯಕ್ರಮ ಮುಗಿಯವರೆಗೂ ಪ್ರಸಾದ ಸೇವೆಯು ವಿವಿಧ ಸದ್ಭಕ್ತರಿಂದ ನಿರಂತರವಾಗಿ ನಡೆಯಲಿದೆಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ 

ಸುದ್ದಿ ಓದಿ