ಬುಡ್ರಕಟ್ಟಿ ಗ್ರಾಮಸ್ಥರಿಂದ ಅಹೋರಾತ್ರಿ ಹೋರಾಟ ಮುಂದುವರಿಕೆ
ಅತೀವೃಷ್ಠಿಯಿಂದ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಪರಿಹಾರಕ್ಕೆ ಒತ್ತಾಯಿಸಿ
ಬೈಲಹೊಂಗಲ 19: ಅಧಿಕಾರಿಗಳ ನಿರ್ಲಕ್ಷದಿಂದ ಅತೀವೃಷ್ಠಿಯಿಂದ ಮನೆ ಕಳೆದುಕೊಂಡು ಪರಿಹಾರ ವಂಚಿತ ಫಲಾನುಭವಿಗಳಿಗೆ ಸರಕಾರವೇ ಘೋಷಣೆ ಮಾಡಿದ ಪ್ರತಿ ಮನೆಗೆ 5 ಲಕ್ಷ ರೂ. ತಕ್ಷಣ ಒದಗಿಸಲು ಸರಕಾರ ಮುಂದಾಗಬೇಕೆಂದು ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್. ಸಿದ್ದನಗೌಡರ ಹೇಳಿದರು.
ಅವರು ತಾಲೂಕಿನ ಬುಡರಕಟ್ಟಿ ಗ್ರಾ.ಪಂ.ವ್ಯಾಪ್ತಿಯಲ್ಲಿ 2019, 2021ನೇ ಸಾಲಿನಲ್ಲಿ ಅತೀವೃಷ್ಠಿಯಿಂದ ಹಾನೀಗೀಡಾದ ಮನೆಗಳಿಗೆ ಪರಿಹಾರ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು. ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ, ಬುಡರಕಟ್ಟಿ ಗೆಳೆಯರ ಬಳಗದ, ನೊಂದ ಜನರ ಆಶ್ರಯದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಗಲು ರಾತ್ರಿ ನಡೆಯುತ್ತಿರುವ ಪ್ರತಿಭಟಣಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಬೆಂಬಲ ಸೂಚಿಸಿ ಮಾತನಾಡಿದ ಅವರು ಕಳೆಮೈ ಕೊರೆಯು ಚಳಿ ಲೆಕ್ಕಿಸದೆ ಕಳೆದ 6 ದಿನಗಳಿಂದ ಪರಿಹಾರಕ್ಕಾಗಿ ಹಗಲು, ರಾತ್ರಿ ನಿರಂತರ ಪ್ರತಿಭಟಣೆ ನಡೆಸುತ್ತಿರುವದು ನಾಡಿಗೆ ಶೊಭೆ ತರುವಂತದ್ದಲ್ಲ. ಸರಕಾರ ಅತೀವೃಷ್ಠಿಯ ಹಾನಿಯನ್ನು ಮನಗಂಡು ಗ್ರಾಮೀಣ ಪ್ರದೇಶದ ಬಡವರಿಗೆ ಮನೆ ನಿರ್ಮಾಣಕ್ಕೆ ಯಡಿಯೂರ್ಪನವ ಅಧಿಕಾರ ಅವಧಿಯಲ್ಲಿ 5 ಲಕ್ಷ ರೂ. ಘೋಷಣೆ ಮಾಡಿ, ರಾಜ್ಯಾದ್ಯಂತ ಫಲಾನುಭವಿಗಳಿಗೆ ನಿಡಿದೆ. ನಾಡಿನ ಗ್ರಾಮಗಳಲ್ಲಿ ಕರ್ತವ್ಯ ನಿರತ ಕಂದಾಯ, ಪಂಚಾಯತ ಅಧಿಕಾರಿಗಳ ಕೈ ಕೆಗಳಗೆ ಕೆಲಸ ಮಾಡುವ ಸಹಾಯಕರ ನಿರ್ಲಕ್ಷದಿಂದ ಸರಕಾರನ್ನೆ ಕೇಳುವ ಮಟ್ಟಕ್ಕೆ ಹೋಗಿರುವದು ದುರಾದೃಷ್ಠಕರ. ಈ ಬಗ್ಗೆ ಉಪವಿಭಾಗಾಧಿಕಾರಿಗಳು ತನಿಖೆಗೆ ಒಳಪಡಿಸಿ, ಸರಕಾರದಿಂದ ಬರುವ ಪರಿಹಾರಗಳು ಅನ್ಯರ ಪಾಲವಾಗದಂತೆ ಸೂಕ್ತ ಫಲಾನುಭವಿಗಳಿಗೆ ಸಲ್ಲುವಂತೆ ಕ್ರಮ ಕೈಕೊಳ್ಳಬೇಕು.
ಸರಕಾರ ಮಟ್ಟದಲ್ಲಿ ಪ್ರತಿಭಟಣೆ ಕುರಿತು ಚರ್ಚೆಯಲ್ಲಿದ್ದು, ಈ ವಿಷಯದ ಬಗ್ಗೆ ಮಾಜಿ, ಹಾಲಿ ಶಾಸಕರುಗಳು ಸರಕಾರದ ಗಮನ ಸೆಳೆದಿದ್ದು, ಶಿಘ್ರದಲ್ಲಿ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಗೋಚರವಾಗುತ್ತಿವೆ. ನಿಮ್ಮ ಹೋರಾಟದಿಂದ ರಾಜ್ಯದಲ್ಲಿ ಈ ತರ ಪರಿಹಾರ ವಂಚಿತ ಫಲಾನುಭವಿಗಳಿಗೆ ನ್ಯಾಯ ದೊರೆಯಲಿದೆ ಎಂದರು.
ಸಿದ್ಧಾರೂಢ ಹೊಂಡಪ್ಪನವರ, ಶಿವಾನಂದ ಕೋಲಕಾರ, ರಫೀಕ ಬಡೇಘರ, ರಮೇಶ ರಾಯಪ್ಪಗೋಳ, ನೇಗಿಲ ಯೋಗಿ ರೈತ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ, ಯಾಸೀನ ಕಿತ್ತೂರ, ಸಂಜು ಪದ್ಮನ್ನವರ, ನಿಂಗಪ್ಪ ನಿಂಗನ್ನವರ, ಪ್ರಭಾಕರ ಭಜಂತ್ರಿ, ಶಶಿಕುಮಾರ ಪಾಟೀಲ ಹಾಗೂ ಪ್ರತಿಭಟನಾಕಾರರು ಇದ್ದರು.