ಸೌಂದತ್ತಿ

ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷೇತರಾಗಿ ಸ್ಪರ್ಧೆ : ಬಸವರಾಜ ಪಟ್ಟಣಶೆಟ್ಟಿ

ಟಿಕೆಟ್ ಕೈ ತಪ್ಪಿದ್ದಕ್ಕೆ  ಪಕ್ಷೇತರಾಗಿ ಸ್ಪರ್ಧೆ  : ಬಸವರಾಜ ಪಟ್ಟಣಶೆಟ್ಟಿ

ಲೋಕದರ್ಶನ ವರದಿ

ಸವದತ್ತಿ 13: ಬಿಜೆಪಿ ಟಿಕೆಟ್ ಆಕಾಂಕ್ಷಿತ ಬಸವರಾಜ ಪಟ್ಟಣಶೆಟ್ಟಿಯವರು ಪಕ್ಷವು ತಮಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸುವದಾಗಿ ಸ್ಪಷ್ಟಣೆ ನೀಡಿದ್ದಾರೆ.

ಸ್ಥಳೀಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು ಬಿಜೆಪಿ ಪಕ್ಷವು ಯುವಕರಿಗೆ ಅವಕಾಶ ನೀಡಬಹುದು ಎಂಬ ವಿಶ್ವಾಸದೊಂದಿಗೆ ಇಲ್ಲಿಯವರೆಗೆ ಕಾಯಲಾಗಿತ್ತು. ಬಿಜೆಪಿ ಪಕ್ಷವು ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವದಿಲ್ಲ ಎಂಬ ಮಾತನ್ನು ತಳ್ಳಿಹಾಕಿ ಮತ್ತೆ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಿರುವದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈಗ ಪಕ್ಷವು ನಮ್ಮನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯದಂತೆ ಪಕ್ಷೇತರರಾಗಿ ಸ್ಪರ್ಧಿಸುವದಾಗಿ ಹೇಳಿದ್ದಾರೆ.

ಪಾಂಡು ಮಬನೂರ, ಈರಪ್ಪ ಅಂಗಡಿ, ಶಂಕರೆಪ್ಪ ಅಂಗಡಿ, ಬಲಭೀಮಪ್ಪ ದಳವಾಯಿ, ಲಕ್ಷ್ಮಣ ದಳವಾಯಿ, ಕಲ್ಪ್ಪ ದಾಸಂಗಳಿ, ಶಿವಾನಂದ ಜಕಾತಿ, ಪತ್ರೆಪ್ಪ ಕಳ್ಳಿಗುದ್ದಿ, ನಾಗರಾಜ ಗೋಪಶೆಟ್ಟಿ, ವೀರಯ್ಯ ಮಠಪತಿ, ಶ್ರೀಶೈಲ್ ಹಿರೇಮಠ, ಈರಯ್ಯ ಕಾಂತಿಮಠ ಸೇರಿದಂತೆ ಪಟ್ಟಣಶೆಟ್ಟಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು 

ಸುದ್ದಿ ಓದಿ