ರಾಷ್ಟ್ರೀಯ

ವಾಯುಮಾಲಿನ್ಯ : ರಾಷ್ಟ್ರ ರಾಜಧಾನಿಯಲ್ಲಿ ಕಳಪೆ ಗಾಳಿ

ವಾಯುಮಾಲಿನ್ಯ : ರಾಷ್ಟ್ರ ರಾಜಧಾನಿಯಲ್ಲಿ ಕಳಪೆ ಗಾಳಿ

ನವದೆಹಲಿ, ಡಿಸೆಂಬರ್ 01: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಮಂಗಳವಾರ ಬೆಳಿಗ್ಗೆ ಹದಗೆಟ್ಟಿದ್ದು, ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 346 ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ದೆಹಲಿಯ ಹಲವಾರು ಪ್ರದೇಶಗಳಲ್ಲಿನ ಎಕ್ಯೂಐ 350 ಕ್ಕಿಂತ ಹೆಚ್ಚಿದ್ದರೆ, ಒಂದೆರಡು ಸ್ಥಳಗಳಲ್ಲಿ ಇದು ಸುಮಾರು 400 ಕ್ಕೆ ತಲುಪಿದ್ದರೆ, ಅಶೋಕ್  ವಿಹಾರ್ ನಲ್ಲಿ 400 ಕ್ಕಿಂತ ಹೆಚ್ಚಿತ್ತು.

ಸಿಪಿಸಿಬಿ ಅಂಕಿಅಂಶಗಳ ಪ್ರಕಾರ ಎನ್‌ಸಿಆರ್‌ನಲ್ಲಿರುವ ಗಾಜಿಯಾಬಾದ್, ಗುರುಗ್ರಾಮ್, ನೋಯ್ಡಾ, ಫರಿದಾಬಾದ್ ನಗರಗಳಲ್ಲಿಯೂ ಸಹ 'ಅತ್ಯಂತ ಕಳಪೆ' ಗಾಳಿ ಬೀಸಿದೆ. 

ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ದಾಖಲಾದ ಐಎಮ್‌ಡಿ ಕನಿಷ್ಠ ತಾಪಮಾನವು 7.6 ಡಿಗ್ರಿ ಸಿ ಆಗಿದ್ದರೆ, ಸಾಪೇಕ್ಷ ಆರ್ದ್ರತೆಯು ಬೆಳಿಗ್ಗೆ ಶೇಕಡಾ 95 ರಷ್ಟಿದೆ, ಗಾಳಿಯನ್ನು ದಟ್ಟವಾಗಿಸಲು ಎರಡೂ ಅಂಶಗಳು ಕಾರಣವಾಗಿವೆ. ಹವಾಮಾನ ತಜ್ಞರು ಬುಧವಾರ ಬೆಳಿಗ್ಗೆ ಮಂಜು ಮುನ್ಸೂಚನೆ ನೀಡಿದ್ದು, ಕನಿಷ್ಠ ತಾಪಮಾನವು 8 ಡಿಗ್ರಿ ಸೆಲ್ಸಿಯಸ್  ಸುತ್ತಲೂ ಸುಳಿಯುವ ಸಾಧ್ಯತೆಯಿದೆ.

ಸುದ್ದಿ ಓದಿ