ರಾಷ್ಟ್ರೀಯ

ಪಿಎಂಎವೈ ಯೋಜನೆಯಡಿ ಎರಡು ತಿಂಗಳಲ್ಲಿ ಮನೆಗಳ ನಿರ್ಮಾಣ; ಮೋದಿ

ಪಿಎಂಎವೈ ಯೋಜನೆಯಡಿ ಎರಡು ತಿಂಗಳಲ್ಲಿ ಮನೆಗಳ ನಿರ್ಮಾಣ; ಮೋದಿ

ನವದೆಹಲಿ,  ಸೆಪ್ಟೆಂಬರ್ 12: ಪ್ರಧಾನಮಂತ್ರಿ ಆವಾಜ್‌ ಯೋಜನೆಯ ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ  ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ಮಿಸಲಾಗಿರುವ 1.75 ಲಕ್ಷ  ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶನಿವಾರ  ಉದ್ಘಾಟಿಸಿದರು. 

ಈ ಎಲ್ಲಾ  ಮನೆಗಳನ್ನು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ನಂತರ  ಮಾತನಾಡಿದ ಮೋದಿ, ಸಾಮಾನ್ಯವಾಗಿ ಯೋಜನೆಯಡಿ ಒಂದು ಮನೆ ನಿರ್ಮಿಸಲು 125 ದಿನಗಳ ಅವಧಿ  ಬೇಕು. ಕೊರೋನಾ ಕಾಲದಲ್ಲಿ 45ರಿಂದ 60 ದಿನಗಳಲ್ಲಿ ನಿರ್ಮಿಸಲಾಗುವುದು ಎಂದರು. 

ಲಾಕ್‌ಡೌನ್‌ ಅವಧಿಯಲ್ಲಿ ನಗರಗಳಿಂದ ಮರಳಿದ ಕಾರ್ಮಿಕರು ಕೆಲಸದ ವೇಗ ಹೆಚ್ಚಿಲಸು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. 

ಪ್ರಧಾನ  ಮಂತ್ರಿ ಆವಾಜ್‌ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳು ಅಥವಾ ಸ್ವಚ್ಛ ಭಾರತ ಅಭಿಯಾನದಡಿ  ನಿರ್ಮಾಣಗೊಂಡಿರುವ ಶೌಚಾಲಯಗಳು ಬಡವರಿಗೆ ಸೌಕರ್ಯಗಲನ್ನು ಕಲ್ಪಿಸುವುದರ ಜೊತೆಗೆ  ಉದ್ಯೋಗ ಮತ್ತು ಸಬಲೀಕರಣವನ್ನು ಕೂಡ ಒದಗಿಸುತ್ತಿದೆ ಎಂದರು. 

ಈ ವರ್ಚ್ಯುವಲ್‌ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಉಪಸ್ಥಿತರಿದ್ದರು.

ಸುದ್ದಿ ಓದಿ